ಸಮಾಜದಲ್ಲಿ ಮೌಲ್ಯ ಕುಸಿಯುತ್ತಿದೆ

7

ಸಮಾಜದಲ್ಲಿ ಮೌಲ್ಯ ಕುಸಿಯುತ್ತಿದೆ

Published:
Updated:

ಮೈಸೂರು: ‘ಪೊಲೀಸ್ ಇಲಾಖೆ ಭ್ರಷ್ಟ ಸಂಸ್ಥೆ ಅಲ್ಲ. ಈ ಇಲಾಖೆಯನ್ನು ಭ್ರಷ್ಟ ಸಂಸ್ಥೆಯೆಂದು ಜರೆಯುವುದು ಸಲ್ಲ. ಭ್ರಷ್ಟಚಾರ ಇಲ್ಲದ ಸಂಸ್ಥೆಯೇ ಇಲ್ಲ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಲ್ಲಿ ತಿಳಿಸಿದರು.ಪ್ರತಿಭಾ ಸಂಸತ್ ನಗರದ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್-125 ಶತಮಾನೋತ್ಸವ ಬೆಳ್ಳಿಹಬ್ಬ ನೆನಪಿನೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ, ‘ಪ್ರಜಾಪ್ರಭುತ್ವ ದಲ್ಲಿ ಪೊಲೀಸರ ಪಾತ್ರ’ ವಿಷಯ ಕುರಿತು ಮಾತನಾಡಿದರು.‘ಸಾವಿಲ್ಲದ ಮನೆಯಿಂದ ಸಾಸಿವೆ ತರುವಂತೆ ಗೌತಮ ಬುದ್ಧ ತಿಳಿಸಿದ್ದ. ಹಾಗೆಯೇ ಭ್ರಷ್ಟಾಚಾರದಿಂದ ಹೊರ ತಾದ ಸಂಸ್ಥೆಯನ್ನು ಹುಡುಕು ವುದು ಕಷ್ಟ. ಎಲ್ಲೆಡೆ ಭ್ರಷ್ಟಾಚಾರ ವಿದೆ. ಸರ್ಕಾರದ ಯಾವುದೇ ಇಲಾಖೆಯಲ್ಲಿ ದುಡಿ ಯುತ್ತಿರುವ ನೌಕರರಿಗೆ ವೇತನ ಕಡಿಮೆ ಇಲ್ಲ. ಕಾನೂನಿನ ಚೌಕಟ್ಟಿನ ಒಳಗೆ ಬರುವ ಆದಾಯಕ್ಕೆ ತೃಪ್ತಿ ಇಟ್ಟು ಕೊಂಡು ಅದನ್ನು ಕೊನೆವರೆಗೆ ಕಾಪಾಡಿಕೊಳ್ಳಬೇಕು’ ಎಂದರು.ಮೌಲ್ಯ ಕುಸಿಯುತ್ತಿದೆ: ‘ಪ್ರಜಾಪ್ರಭುತ್ವದ ಮಹತ್ವವನ್ನು ಎಲ್ಲರು ಮರೆಯುತ್ತಿದ್ದೇವೆ. ಹಿಂದಿನ ಪ್ರಜಾಪ್ರಭುತ್ವ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಸಮಾಜದಲ್ಲಿ ಮೌಲ್ಯ ಕುಸಿಯುತ್ತಿದೆ’ ಎಂದು ತಿಳಿಸಿದರು.‘ಭಾರತಕ್ಕೆ ಯಾವ ರಾಜನೀತಿ ಬೇಕು ಎಂಬುದನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಧರಿಸಿ ಸಂವಿಧಾ ನವನ್ನು ರೂಪಿಸಲಾಗಿದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ವ್ಯವಸ್ಥೆಯನ್ನು ತಂದು ಜನಪ್ರತಿನಿಧಿ ಗಳನ್ನು ಆಯ್ಕೆ ಮಾಡಲಾಯಿತು. ಆದರೆ ಪ್ರಜಾಪ್ರಭುತ್ವ ಹಾದಿಯನ್ನು ಮರೆತು ಬೇರೆ ದಿಕ್ಕಿನಲ್ಲಿ ಸಮಾಜ ಹೋಗುತ್ತಿದೆ’ ಎಂದು ತಿಳಿಸಿದರು.‘ಜನಪ್ರತಿನಿಧಿಯು ತಹಶೀ ಲ್ದಾರ್, ಇನ್ಸ್‌ಪೆಕ್ಟರ್ ಬೇಕಾದ ಅಧಿಕಾರಿಗಳನ್ನೇ ಹಾಕಿಸಿ ಕೊಳ್ಳುತ್ತಾರೆ. ಇಲ್ಲವಾದಲ್ಲಿ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳುತ್ತಾರೆ. ಶಾಸಕರು, ಸಂಸದರು ತಮ್ಮನ್ನು ಕಾಣಲು ಬಂದರೆ ನಾಳೆ ಬನ್ನಿ ಎಂದು ಹೇಳುವ ಧೈರ್ಯ ಯಾವ ಜಿಲ್ಲಾಧಿಕಾರಿಗೂ ಇಲ್ಲ. ಇದು ಮೌಲ್ಯದ ಕುಸಿತ’ ಎಂದು ಬಣ್ಣಿಸಿದರು.‘ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆ ದಿನೆ ದಿನೇ ವ್ಯಾಪಿಸುತ್ತಿದೆ. ದುರಾಡಳಿತ, ಭ್ರಷ್ಟಾಚಾರದಿಂದ ಜನತೆ ಸೋತು ಹೋಗಿದ್ದಾರೆ. ನಾನು ಸುಮ್ಮನೆ ಮಾತನಾಡುವುದಿಲ್ಲ. ಹೇಳಿದ್ದನ್ನು ಜೀವನದಲ್ಲಿ ಅನುಸರಿಸುತ್ತೇನೆ. ಇದುವರೆಗೆ ಬಿಡಿಎ ನಿವೇಶನ, ನ್ಯಾಯಾಧೀಶರ, ವಕೀಲರ ಬಡಾವಣೆಯಲ್ಲಿ ನಿವೇಶನಕ್ಕೆ ಅರ್ಜಿ ಹಾಕಿದವನಲ್ಲ. ಭೂಲೋಕದಲ್ಲಿ ಒಂದು ಇಂಚು ಭೂಮಿ ನನ್ನದೆಂದು ಇಲ್ಲ’ ಎಂದು ಹೇಳಿದರು.‘ನನ್ನ ಆಸ್ತಿ ವಿವರವನ್ನು ವೆಬ್ ಸೈಟ್‌ನಲ್ಲಿ ಹಾಕಿದ್ದೇನೆ. ಯಾವುದನ್ನು ಮರೆಮಾಚಿಲ್ಲ. ಒಂದು ಕಾಲದಲ್ಲಿ ಬಂಗಲೆಗೆ 90 ಸಾವಿರ ರೂಪಾಯಿ ಬಾಡಿಗೆ ಕಟ್ಟುತ್ತಿದ್ದೆ. ನನ್ನ ತಾಯಿ ಹೇಳಿದರೆಂದು ರೂ.35 ಸಾವಿರ ವೇತನಕ್ಕೆ ನ್ಯಾಯಾಧೀಶರ ಹುದ್ದೆಗೆ ಬಂದೆ. 6 ವರ್ಷಗಳ ಕಾಲ ನ್ಯಾಯಾ ಧೀಶನಾಗಿ ದುಡಿ ದದ್ದು ನನಗೆ ತೃಪ್ತಿ ತಂದಿದೆ’ ಎಂದು ಮನದಾಳದ ಮಾತು ಹಂಚಿಕೊಂಡರು.ರಾಜ್ಯ ಪೊಲೀಸ್ ನಿವೃತ್ತ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಹ ಅವರು ಮಾತನಾಡಿ, ‘ಪೊಲೀಸ್ ಸಿಬ್ಬಂದಿ ಕಾನೂನುಬದ್ಧ, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆಡಳಿತ ಮತ್ತು ಕೆಲಸದಲ್ಲಿ ಪಾರ ದರ್ಶಕತೆ ಇರಬೇಕು. ಇವರು ನಮ್ಮ ಧರ್ಮ ದವರು, ಸಂಬಂಧಿಕರು, ಸ್ನೇಹಿತರು ಎಂಬ ಭಾವನೆಯಿಂದ ಕೆಲಸ ಮಾಡಬಾರದು’ ಎಂದರು.ದಕ್ಷಿಣ ವಲಯ ಐಜಿಪಿ ಎ.ಎಸ್.ಎನ್.ಮೂರ್ತಿ, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಅಮರಕುಮಾರ್ ಪಾಂಡೆ, ನಗರ ಪೊಲೀಸ್ ಕಮಿಷನರ್ ಸುನಿಲ್ ಅಗರವಾಲ್ ಉಪಸ್ಥಿತರಿದ್ದರು. ಪ್ರತಿಭಾ ಸಂಸತ್ ಅಧ್ಯಕ್ಷ ವಿದ್ವಾನ್ ಎಂ.ಶಿವಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಮತ್ತು ಅಜಯ್‌ಕುಮಾರ ಸಿಂಹ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry