ಶನಿವಾರ, ಮೇ 15, 2021
22 °C

ಸಮಾಜದ ಏಳಿಗೆಗೆ ಕೆಲಸ ಮಾಡಿ- ಶಿವರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹಚ್ಚರಣ ಬ್ರಾಹ್ಮಣ ಸಮುದಾಯವು ಸಮಾಜದ ಏಳಿಗೆಗೆ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತವಾಗಬೇಕು ಎಂದು ಹಿರಿಯ ನಟ ಶಿವರಾಂ ಕರೆ ನೀಡಿದರು.ಬ್ರಹಚ್ಚರಣ ಬ್ರಾಹ್ಮಣ ಸಮುದಾಯಕ್ಕೆ ಸೇರಿದ 75 ವಸಂತಗಳನ್ನು ಪೂರೈಸಿರುವ 80 ಮಂದಿ ಸಾಧಕರಿಗೆ ನಗರದ ಬಸವನಗುಡಿಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ನಾಡಿನ ಎಲ್ಲ ಸಮುದಾಯಗಳು ಇಂದಿಗೂ ಹೋರಾಟದ ಮೂಲಕವೇ ಏಳಿಗೆ ಕಾಣಬೇಕಾದ ಪರಿಸ್ಥಿತಿ ಇದೆ~ ಎಂದು ವಿಷಾದ ವ್ಯಕ್ತಪಡಿಸಿದರು.ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, `ನಾಡಿನ ಎಲ್ಲ ಸಮುದಾಯಗಳು ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಬೇಕು. ಬ್ರಾಹ್ಮಣ ಸಮುದಾಯದವರೂ ತಾವೆಲ್ಲ ಒಂದು ಎಂಬ ಭಾವನೆಯಿಂದಿರಬೇಕು~ ಎಂದು ಹೇಳಿದರು.`ಬೃಹಚ್ಚರಣ~ ತ್ರೈಮಾಸಿಕ ಪತ್ರಿಕೆಯನ್ನು ಶಿವರಾಮ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಕಡ 80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ `ಪ್ರತಿಭಾ ಪುರಸ್ಕಾರ~ ಪ್ರಶಸ್ತಿ ನೀಡಲಾಯಿತು. ಬಿಬಿಎಂಪಿ ಸದಸ್ಯ ಬಿ.ಎಸ್. ಸತ್ಯನಾರಾಯಣ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.