ಸಮಾಜದ ಪ್ರತಿಬಿಂಬವೇ ಸಿನಿಮಾ- ಬಿ.ಸುರೇಶ

7

ಸಮಾಜದ ಪ್ರತಿಬಿಂಬವೇ ಸಿನಿಮಾ- ಬಿ.ಸುರೇಶ

Published:
Updated:

ಸಿದ್ದಾಪುರ:  `ಇಂದಿನ  ಸಿನಿಮಾ  ಪ್ರಸ್ತುತ  ಸಮಾಜದ ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತದೆ~  ಎಂದು ಖ್ಯಾತ  ನಿರ್ದೇಶಕ ಬಿ.ಸುರೇಶ್ ಅಭಿಪ್ರಾಯ ಪಟ್ಟರು.ಪಟ್ಟಣದ  ಮಹಾತ್ಮಾಗಾಂಧಿ ಶತಾಬ್ದಿ ಕಲಾ, ವಾಣಿಜ್ಯ ಮತ್ತು ಗಣೇಶ ಹೆಗಡೆ ದೊಡ್ಮನೆ ವಿಜ್ಞಾನ ಕಾಲೇಜಿನಲ್ಲಿ  ಈಚೆಗೆ ಏರ್ಪಡಿಸಿದ್ದ `ಪುಟ್ಟಕ್ಕನ ಹೈವೆ~ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಕಾಲೇಜಿನ ಸಿನೆಮಾ ಕ್ಲಬ್‌ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ  `ಸಿನಿಮಾ ಮತ್ತು ಭಾಷೆ~  ವಿಷಯದ ಕುರಿತು ಉಪನ್ಯಾಸ ನೀಡಿದ ಅವರು,ಒಳ್ಳೆಯ ಕಲಾತ್ಮಕ ಸಿನಿಮಾಗಳನ್ನು ಪ್ರದರ್ಶಿ ಸುವ ಮೂಲಕ ಉತ್ತಮ ಅಭಿರುಚಿ ಯನ್ನು  ಪ್ರೇಕ್ಷಕರಲ್ಲಿ ಬೆಳೆಸಬೇಕಿದೆ. ದೃಶ್ಯ ಮತ್ತು ಶ್ರವ್ಯ ಮಾಧ್ಯಮದ ಸಿನಿಮಾ ಪ್ರೇಕ್ಷಕನಿಗೆ ಪ್ರಖರವಾದ  ಸಂವೇದನೆ ನೀಡಬಲ್ಲದು. ಸಾಮಾಜಿಕ ಎಚ್ಚರವನ್ನು ಮೂಡಿಸುವಲ್ಲಿ ಯಾವುದೇ ಚಲನಚಿತ್ರದ ಸಾರ್ಥಕತೆ ಇರುತ್ತದೆ ಎಂದರು.ನಮ್ಮಳಗಿರುವ ಕಥೆಯನ್ನು ಅಥವಾ ದರ್ಶನವನ್ನು ಇತರರಿಗೆ ಮುಟ್ಟಿಸಲು ಭಾಷೆ ಅವಶ್ಯಕವಾಗಿದೆ. ಭಾಷೆಯನ್ನು  ಉಪಯೋಗಿಸುವ ಕ್ರಮ ಗಳು ಭಿನ್ನವಾಗಿರುವಂತೆ, `ಸಿನಿಮಾ~ ಎಂಬ ಮಾಧ್ಯಮದ ಭಾಷೆಯೂ ಬೇರೆ ರೀತಿಯದ್ದಾಗಿದೆ ಎಂದರು. ಅಶೋಕ್ ಕೊಡಗು,ಯಮುನಾ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ಆರ್.ನಾಗರಾಜ ಅಧ್ಯಕ್ಷತೆ ವಹಿಸಿದ್ದರು.ಡಾ.ವಿಠ್ಠಲ ಭಂಡಾರಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಸಿನಿಮಾ ಕ್ಲಬ್‌ನ ಸಂಚಾಲಕ  ಜೆ.ಎಸ್.ಹೆಗಡೆ ಸ್ವಾಗತಿಸಿದರು.ಗೀತಾ ವಂದಿಸಿದರು. ಕಾವ್ಯಶ್ರೀ ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು `ಪುಟ್ಟಕ್ಕನ ಹೈವೆ~  ಚಲನಚಿತ್ರದ ಪ್ರದರ್ಶನ ಮತ್ತು  ಸಂವಾದ ನಡೆ ಯಿತು. ಕಾಲೇಜಿನ ಕನ್ನಡ ಸಂಘ ಹಾಗೂ ಸಿನಿಮಾ ಕ್ಲಬ್ ಸಂಯುಕ್ತ ವಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry