ಸಮಾಜದ ಮುಖ್ಯವಾಹಿನಿಗೆ ಬನ್ನಿ: ನ್ಯಾಯಾಧೀಶ

7

ಸಮಾಜದ ಮುಖ್ಯವಾಹಿನಿಗೆ ಬನ್ನಿ: ನ್ಯಾಯಾಧೀಶ

Published:
Updated:

ಯಳಂದೂರು: `ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಶಿಕ್ಷಣ ಪಡೆದುಕೊಳ್ಳಬೇಕು. ಮದ್ಯಪಾನ ದಂತಹ ದುಶ್ಚಟಗಳಿಂದ ದೂರ ಸರಿದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು~ ಎಂದು ತಾಲ್ಲೂಕು ಸಿವಿಲ್ ನ್ಯಾಯಾಧೀಶ ಎಚ್.ಆರ್. ರವಿಕುಮಾರ್ ಕರೆ ನೀಡಿದರು.ಪಟ್ಟಣ ಪಂಚಾಯಿತಿ ವತಿಯಿಂದ ಸಿಡಿಎಸ್ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಪೌರಕಾರ್ಮಿಕರು ಮಕ್ಕಳನ್ನು ತಮ್ಮ ವೃತ್ತಿಗೆ ದೂಡುವ ಬದಲು ಶಿಕ್ಷಣ ಕೊಡಿಸಬೇಕು. ಇವರಲ್ಲಿ ಹೆಚ್ಚಿ ನವರು ಮದ್ಯಪಾನದಂತಹ ದುಶ್ಚಟ ಗಳಿಗೆ ಬಲಿಯಾಗಿ ತಮ್ಮ ಸಂಸಾರವನ್ನು ಅನಾಥರಾಗಿ ಮಾಡುತ್ತಾರೆ. ಇದರ ಬದಲು ತಾವು ಕಷ್ಟ ಪಟ್ಟು ಸಂಪಾದಿಸುವ ಹಣವನ್ನು ಕುಟುಂಬದ, ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು. ಸರ್ಕಾರ ನೀಡುವ ಸೌಲಭ್ಯಗಳನ್ನು ಮಾರಿಕೊಳ್ಳದೆ ಅದನ್ನು ಬಳಸಿಕೊಳ್ಳು ವತ್ತ ಚಿತ್ತ ಹರಿಸಬೇಕು ಎಂದರು.ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಪೌರ ಕಾರ್ಮಿಕ ದಿನಾಚರಣೆ ಆಚರಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಈ ಮೂಲಕ ಈ ಸಮಾಜದ ಜನಾಂಗದವರಿಗೆ ಕಾನೂನಿನ ಅರಿವು ಮೂಡಿಸಿ ಶಕ್ತಿ ತುಂಬುವ ಕೆಲಸವಾಗ ಬೇಕಿದೆ.ಸರ್ಕಾರ ವಾರ್ಷಿಕವಾಗಿ ಇವರಿಗೆ ಸರ್ಕಾರಿ ರಜೆ ದಿನ ಹೊರತುಪಡಿಸಿ 15 ದಿನಗಳ ರಜೆ ತೆಗೆದುಕೊಳ್ಳುವ ಅವಕಾಶ ನೀಡಿದೆ. ಜೊತೆಗೆ ಉತ್ತಮ ಕರ್ತವ್ಯ ನಿರ್ವಹಿಸಿದವರಿಗೆ 2 ಸಾವಿರ ರೂ. ಪ್ರೋತ್ಸಾಹದಾಯಕ ಬಹುಮಾನ ನೀಡುವ ಯೋಜನೆಯನ್ನೂ ಹಮ್ಮಿ ಕೊಂಡಿದೆ. ಅಲ್ಲದೆ ಇವರ ಅಭ್ಯುದ್ಯ ಯಕ್ಕೆ ಹಲವಾರು ಕಾರ್ಯ ಕ್ರಮ ಗಳನ್ನು ಹಮ್ಮಿಕೊಂಡಿದ್ದು, ಇವೆಲ್ಲದರ ಅನುಕೂಲ ಪಡೆದು ಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.ಉತ್ತಮ ಪೌರಕಾರ್ಮಿಕರಾದ ಅಮಾಸೆ ಹಾಗೂ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಚಿನ್ನಮ್ಮ ಮರಯ್ಯ, ಸದಸ್ಯರಾದ ಮಲ್ಲಯ್ಯ, ಸೋಮನಾಯಕ, ಸತೀಶ್, ನಾಗೇಶ್, ಮುಖ್ಯಾಧಿಕಾರಿ ವಿಜಯ, ಸರ್ಕಲ್ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್, ಜೆಇ ಬೆಟ್ಟಸ್ವಾಮಿ, ಗಿರೀಶ್ ಮುಖಂಡರಾದ ಗೋವಿಂದರಾಜು, ನಾಗರಾಜು, ರಂಗಸ್ವಾಮಿ, ಮಹೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry