ಸಮಾಜವಾದಿ ಚಳವಳಿ ಇಂದಿನ ಅಗತ್ಯ

ಮಂಗಳವಾರ, ಜೂಲೈ 23, 2019
25 °C

ಸಮಾಜವಾದಿ ಚಳವಳಿ ಇಂದಿನ ಅಗತ್ಯ

Published:
Updated:

ಬೆಂಗಳೂರು: `ಶಾಂತವೇರಿ ಗೋಪಾಲ ಗೌಡರ ಕಾಲದಲ್ಲಿ ಕ್ರಿಯಾಶೀಲವಾಗಿದ್ದ ಸಮಾಜವಾದಿ ಚಳುವಳಿ ಇಂದು ಅತ್ಯಂತ ಹೆಚ್ಚು ಪ್ರಸ್ತುತವಾಗಿದೆ~ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.ಕನ್ನಡ ಜನಶಕ್ತಿ ವೇದಿಕೆಯು ನಗರದಲ್ಲಿ ಗುರುವಾರ ಏರ್ಪಡಿಸಿದ್ದ `ಶಾಂತವೇರಿ ಗೋಪಾಲಗೌಡ ಒಂದು ನೆನಪು~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಅಂದು ಭೂಮಾಲೀಕರ ವಿರುದ್ಧ ರೈತ ಹೋರಾಟ ನಡೆದಿತ್ತು. ಇಂದು ಇಂಗ್ಲಿಷ್ ಭಾಷಾ ನೀತಿಯನ್ನು ವಿರೋಧಿಸಿ ಹೋರಾಟ ನಡೆಯ ಬೇಕಾಗಿದೆ. ಜೊತೆಗೆ ಆರ್ಥಿಕ ಉದಾರೀ ಕರಣ, ಸರ್ಕಾರಗಳು ರೈತರ ಜಮೀನನ್ನು ಬಂಡವಾಳಗಾರರಿಗೆ ನೀಡುತ್ತಿರುವುದನ್ನು ವಿರೋಧಿಸಬೇಕಿದ್ದು, ಈ ಬಗ್ಗೆ ಗಂಭೀರ ವಿಶ್ಲೇಷಣೆ ನಡೆಯಬೇಕು~ ಎಂದು ನುಡಿದರು.ಕುಟುಂಬ ರಾಜಕಾರಣ: ಕುಟುಂಬ ರಾಜಕಾರಣವು ಕೆಲವು ಸಂದರ್ಭಗಳಲ್ಲಿ ಮಾತ್ರ ನಡೆಯುತ್ತದೆ. ಗೋಪಾಲಗೌಡರ ಮಗ ರಾಮಮನೋಹರ್ ಅವರನ್ನು ಕಣಕ್ಕಿಳಿಸಿದಾಗ, ಮತದಾರರು ಲಕ್ಷಾಂ ತರ ರೂಪಾಯಿಗಳನ್ನು ಸುರಿದ ವಿರೋಧಿ ಅಭ್ಯರ್ಥಿಯನ್ನು ಗೆಲ್ಲಿಸಿದರೇ ಹೊರತು ಸಮಾಜವಾದಿಯ ಮಗ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೇ ಅವರನ್ನು ಸೋಲಿಸಿದರು ಎಂದು ಸ್ಮರಿಸಿದರು.ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್, `ಹಲವು ಭ್ರಷ್ಟಾಚಾರದ ಆರೋಪಗಳಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಅಂಟಿ ಕೊಂಡಿದ್ದಾರೆ.ಆದರೆ ಹಲವು ವರ್ಷ ಗಳಿಂದ ವಿರೋಧ ಪಕ್ಷದಲ್ಲಿದ್ದ ಅವರು ಮುಖ್ಯಮಂತ್ರಿಯಾದ ನಂತರ ಏನಾಗ ಬೇಕಿತ್ತು. ಅವರ ವಿವೇಚನೆಗೆ ಏನಾಗಿದೆ~ ಎಂದು ಖಾರವಾಗಿ ಪ್ರಶ್ನಿಸಿದರು.ರಾಜ್ಯದಲ್ಲಿ ಅಧ್ವಾನದ ಪರಿಸ್ಥಿತಿ ಇದ್ದರೂ ಜನರೇಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ ಅವರು, ಜನವಿರೋಧಿ ನೀತಿ ಗಳನ್ನು ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಯಾವ ರಾಜಕೀಯ ಪಕ್ಷದ ಸೋಂಕೂ ಇಲ್ಲದೇ ಹೋರಾಟ ಮುಂದು ವರೆಸಬೇಕು ಎಂದು ಸಲಹೆ ನೀಡಿದರು.ಬಿಜೆಪಿ ಮುಖಂಡ ಅಶ್ವತ್ಥನಾರಾ ಯಣ, `ತಮ್ಮ ರಾಜಕೀಯ ಜೀವನದಲ್ಲಿ ಗೋಪಾಲಗೌಡರು ಎಂದಿಗೂ ಒಳ ಒಪ್ಪಂದ ಮಾಡಿಕೊಳ್ಳಲಿಲ್ಲ. ಆದರೆ ಇಂದು ಹೊರ ಹಾಗೂ ಒಳ ಒಪ್ಪಂದ ಗಳು ನಡೆಯುತ್ತಿವೆ.ರಾಜಕೀಯದ ಹಿನ್ನೆಲೆಯಿರದಿದ್ದರೂ ದಿಟ್ಟ ಹೆಜ್ಜೆ ಸ್ಪಷ್ಟ ಗುರಿಯೊಂದಿಗೆ ಅವರು ರಾಜಕಾರಣ ಮಾಡಿದರು~ ಎಂದು ಸ್ಮರಿಸಿದರು.ಅಹಿಂದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ, ಸಂಘಟನೆಯ ಅಧ್ಯಕ್ಷ ಸಿ.ಕೆ. ರಾಮೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry