ಸಮಾಜವಾದಿ ಪಕ್ಷ ಮುನ್ನಡೆ?

7

ಸಮಾಜವಾದಿ ಪಕ್ಷ ಮುನ್ನಡೆ?

Published:
Updated:

ನವದೆಹಲಿ: ಇಡೀ ದೇಶದ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಲೋಕದಳ ಮೈತ್ರಿಕೂಟ 99 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಸಾಧ್ಯತೆಗಳು ಕಾಣುತ್ತಿವೆ ಎಂದು ಮತಗಟ್ಟೆ ಸಮೀಕ್ಷೆಯಲ್ಲಿ ಹೇಳಲಾಗಿದೆ.ಸ್ಟಾರ್ ನ್ಯೂಸ್- ನೀಲ್‌ಸನ್ ಸಮೀಕ್ಷೆ ಪ್ರಕಾರ, ರಾಜ್ಯದ ಮತದಾರರು ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗಲಿದ್ದಾರೆ.ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷವು ಈ ಬಾರಿ 135 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳುತ್ತದೆ. 2007ರ ಚುನಾವಣೆಯಲ್ಲಿ ಪಕ್ಷವು 97 ಸ್ಥಾನಗಳಲ್ಲಿ ಗೆದ್ದಿತ್ತು. 2007ರಲ್ಲಿ 206 ಸ್ಥಾನಗಳಲ್ಲಿ ಗೆದ್ದು ನಿಚ್ಚಳ ಬಹುಮತ ಪಡೆದುಕೊಂಡಿದ್ದ ಬಹುಜನ ಸಮಾಜವಾದಿ ಪಕ್ಷವು ಈ ಬಾರಿ 101 ಸ್ಥಾನಗಳಲ್ಲಿ ಮಾತ್ರವೇ ಗೆಲ್ಲುವ ಮೂಲಕ ಅಧಿಕಾರ ಕಳೆದುಕೊಳ್ಳಲಿದೆ.ಇನ್ನು ಬಿಜೆಪಿ ಕೇವಲ 61 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. 2007ರ ಚುನಾವಣೆಯಲ್ಲಿ ಪಕ್ಷವು 51 ಸ್ಥಾನಗಳಲ್ಲಿ ಗೆದ್ದಿತ್ತು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಂಹಪಾಲು ಎನ್ನುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ 79 ಸ್ಥಾನಗಳಲ್ಲಿ ಹಾಗೂ ಮೈತ್ರಿ ಪಾಲುದಾರ ಪಕ್ಷ ಆರ್‌ಎಲ್‌ಡಿ 20 ಸ್ಥಾನಗಳಲ್ಲಿ ಗೆಲ್ಲುವ ಲಕ್ಷಣಗಳು ಕಾಣುತ್ತಿವೆ.

ಪೂರ್ವಾಂಚಲದಲ್ಲಿ 48, ಹರಿತ್ ಪ್ರದೇಶದಲ್ಲಿ 39, ಬುಂದೇಲ್‌ಖಂಡದಲ್ಲಿ 8 ಹಾಗೂ ಅವಧ್ ಪ್ರದೇಶದಲ್ಲಿ 6 ಸ್ಥಾನಗಳಲ್ಲಿ ಬಿಎಸ್‌ಪಿ ಜಯಭೇರಿ ಬಾರಿಸುವ ಸಾಧ್ಯತೆ ಇದೆ.ಪೂರ್ವ ಉತ್ತರ ಪ್ರದೇಶದಲ್ಲಿ 71, ಪಶ್ಚಿಮ ಉತ್ತರ ಪ್ರದೇಶದಲ್ಲಿ 38, ಬುಂದೇಲ್‌ಖಂಡದಲ್ಲಿ 21 ಹಾಗೂ ಮಧ್ಯ ಉತ್ತರ ಪ್ರದೇಶದಲ್ಲಿ 21 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷವು ಗೆಲ್ಲುವ ನಿರೀಕ್ಷೆ ಇದೆ.ಇನ್ನು ಕಾಂಗ್ರೆಸ್ ಪಕ್ಷವು ಈ ಎಲ್ಲ ಪ್ರದೇಶಗಳಲ್ಲಿ ಕ್ರಮವಾಗಿ 35, 13, 4, 27  ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಸಂಭವ ಇದೆ. ಮೈತ್ರಿ ಪಾಲುದಾರ ಆರ್‌ಎಲ್‌ಡಿ ಪಕ್ಷವೊಂದೇ ಪಶ್ಚಿಮ ಉತ್ತರ ಪ್ರದೇಶದಲ್ಲಿ 20 ಸ್ಥಾನಗಳನ್ನು ಗೆಲ್ಲಲಿದೆ.ಇನ್ನು ಬಿಜೆಪಿ ಮಟ್ಟಿಗೆ ಹೇಳುವುದಾದರೆ, ಪೂರ್ವಾಂಚಲ-21, ಹರಿತ್ ಪ್ರದೇಶ-33 ಹಾಗೂ ಅವಧ್ ಪ್ರದೇಶದಲ್ಲಿ 7 ಸ್ಥಾನಗಳಲ್ಲಿ ಗೆಲ್ಲುವನಿರೀಕ್ಷೆ ಇದೆ.ಬುಂದೇಲ್‌ಖಂಡದಲ್ಲಿ ಠೇವಣಿ ಕಳೆದುಕೊಂಡರೂ ಅಚ್ಚರಿ ಇಲ್ಲ ಎಂದು ಸಮೀಕ್ಷೆ ಹೇಳಿದೆ.             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry