ಮಂಗಳವಾರ, ಜೂನ್ 22, 2021
29 °C

ಸಮಾಜ ಮುಖಿಯಾಗಿ ಕೆಲಸ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ನಡೆದುಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡಬೇಕೆಂದು ಕೃಷ್ಣಾ ತೀರ ಮುಳುಗಡೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಚಾಲಕ ಜಿ.ಸಿ. ಮುತ್ತಲದಿನ್ನಿ ಹೇಳಿದರು.ಅವರು ಬೇನಾಳ್ ರೇಲ್ವೆ ಸ್ಟೇಶನ್ ಪುನರ್ ವಸತಿ ಕೇಂದ್ರದಲ್ಲಿ ನಿಡಗುಂದಿಯ ಎಮ್.ವಿ. ನಾಗಠಾಣ ಕಲಾ ಮಹಾವಿದ್ಯಾಲಯ ಏರ್ಪಡಿಸಿರುವ 7 ದಿನಗಳ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿಸ್ತು ಸಂಘಟನೆಯಿಂದ ಹೋರಾಟ ಮಾಡಿದರೆ ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಅಸಾಧ್ಯವಾದುದನ್ನು ಸಾಧಿಸ ಬಹುದು. ಅದಕ್ಕೆ ಬೇನಾಳ್ ಪುನರ್ ವಸತಿ ಕೇಂದ್ರ ಉದಾಹರಣೆಯಾಗಿದ್ದು, ಮುಳುಗಡೆ ಪ್ರಕ್ರಿಯೆ ಮುಗಿದು ಹೊಸ ಕೇಂದ್ರ ಶುರುವಾದಾಗಿನಿಂದ ಇಲ್ಲಿಯವರೆಗೆ 42 ಕೋಟಿ ರೂಪಾಯಿ ಕೆಲಸವನ್ನು ಬೇನಾಳ್ ಸಂತ್ರಸ್ತರು ಸರಕಾರದಿಂದ ಪಡೆದುಕೊಂಡಿದ್ದಾರೆ ಎಂದರುಎಮ್.ವಿ. ನಾಗಠಾಣ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ, ಪ್ರೊ. ಡಿ.ಆರ್. ಮಳಖೇಡ, ರಾಷ್ಟ್ರ ಕಟ್ಟುವುದರಲ್ಲಿ ಯುವಕರ ಪಾತ್ರ ಬಹಳಷ್ಟಿದ್ದು, ದೇಶ ಭಾಷೆಯತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.

ವಿದ್ಯಾರ್ಥಿಗಳ ಭವಿಷ್ಯದ ಬಾಳಿಗೆ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.ಭಗವತಿ ಗ್ರಾಮದ ಪದವಿ ಪೂವ್ ಮಹಾವಿದ್ಯಾಲಯದ ಉಪನ್ಯಾಸಕ ಬಿ.ವೈ. ಕೆಳಗಿನಮನಿ ವಿಶೇಷ ಉಪನ್ಯಾಸ ನೀಡಿದರು. ಸಂತ್ರಸ್ತ ಮುಖಂಡರಾದ ಬುಡ್ಡಾಸಾಬ ಬಾಗವಾನ, ತಾ.ಪಂ. ಮಾಜಿ ಸದಸ್ಯೆ ಕಮಲಮ್ಮ ಆಲಮಟ್ಟಿ, ಎಸ್‌ಡಿ.ಎಂ.ಸಿ. ಅಧ್ಯಕ್ಷ ರವಿ ಬಿರಾದಾರ, ಪತ್ರಕರ್ತ ನಿಲೇಶ್ ಬೇನಾಳ್, ತುಕ್ಕಪ್ಪಗೌಡ ಬಿರಾದಾರ, ಯಮನಪ್ಪ ಕುಂಬಾರ, ಎಲ್.ಟಿ. ಚವ್ಹಾಣ್ ಮೊದಲಾದವರಿದ್ದರು.  ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಸಿ.ಬಿ. ಸಂಗಮ ಸ್ವಾಗತಿಸಿದರು. ಲಾಲ್‌ಸಾಬ ಮೇಲಿನಮನಿ ನಿರೂಪಿಸಿದರು. ಕುಮಾರಿ ಚಂದ್ರಗಿರಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.