ಸಮಾಜ ಸೇವೆಯಲ್ಲಿ ತೊಡಗಲು ಯುವಕರಿಗೆ ಸಲಹೆ

7

ಸಮಾಜ ಸೇವೆಯಲ್ಲಿ ತೊಡಗಲು ಯುವಕರಿಗೆ ಸಲಹೆ

Published:
Updated:

ಗದಗ: ಯುವಕರು ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಮಾಜ ಪೂರಕ ಕೆಲಸಗಳಲ್ಲಿ ಭಾಗವಹಿಸಬೇಕು ಎಂದು ಸಿಜಿಬಿ ಹಿರೇಮಠ ಸಲಹೆ ನೀಡಿದರು.ನಗರದ ಜನಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆದ ವಿವಿಧ ಕಾರ್ಯಕ್ರಮ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ದುಶ್ಚಟಗಳಿಂದ ದೂರವಿದ್ದು ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶಯ್ಯ ಮಾತನಾಡಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ತತ್ವದ ಮೇಲೆ ಯುವಕರು ನಿಸ್ವಾರ್ಥ ಭಾವನೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದು ಹೇಳಿದರು.ರಾಮಣ್ಣ ರಾಂಪೂರ ಹಾಗೂ ನೂರಲ್ಲಾ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಳಗುಂದ ಅತಿಥಿಯಾಗಿ ಭಾಗವಹಿಸಿದ್ದರು.ಬೇಲೇರಿ, ಸೈಯ್ಯದ್, ಸಂತೋಷ ಬಣಕಾರ, ಇಕ್ಬಾಲ್ ಹಣಗಿ, ಅನಿಲ ಕಾಳೆ, ಯಲ್ಲಪ್ಪ ರಾಮಗಿರಿ, ವಿನಾಯಕ ತಿಮ್ಮಾಪೂರ, ಬಸವರಾಜ ಬಿಳೆಯಲಿ, ಮಲ್ಲಿಕಾರ್ಜುನ ಬಣಕಾರ ಮತ್ತಿತರರು ಹಾಜರಿದ್ದರು. ನಬೀಸಾಬ್ ಕೊರ್ಲಹಳ್ಳಿ ಸ್ವಾಗತಿಸಿದರು. ಶರೀಫ್ ಬಿಳೆಯಲಿ ನಿರೂಪಿಸಿದರು. ಸಂತೋಷ ಬಣಕಾರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry