ಸೋಮವಾರ, ಮಾರ್ಚ್ 8, 2021
22 °C

ಸಮಾಜ ಸೇವೆಯಿಂದ ಪುಣ್ಯ:ವೀರೇಂದ್ರಹೆಗ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಾಜ ಸೇವೆಯಿಂದ ಪುಣ್ಯ:ವೀರೇಂದ್ರಹೆಗ್ಗಡೆ

ಕಾರ್ಕಳ: ಸ್ವಯಂ ಸೇವೆಯ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದಾಗ ನಾವು ಪುಣ್ಯಭಾಜನರಾಗುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇಲ್ಲಿ ನುಡಿದರು.  ಇಲ್ಲಿನ ದಾನಶಾಲೆಯ ಬಾಹುಬಲಿ ಪ್ರವಚನ ಮಂದಿರದಲ್ಲಿ ಶನಿವಾರ ಸಂಜೆ ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಸೇವೆಗೆ ಸ್ಪರ್ಧೆಯ ಅಗತ್ಯವಿಲ್ಲ. ಸಮಾಜದ ಜನತೆಗೆ ಹಿತವಾಗುವ ಕಾರ್ಯವೇ ಪರೋಪಕಾರ ಎನಿಸುತ್ತದೆ. ಅದುವೇ ಸೇವಾಧರ್ಮ ಎಂದರು.ಸೇವಾ ಸ್ಫೂರ್ತಿ ಬೆಳೆಸಿಕೊಂಡಾಗ ವ್ಯಕ್ತಿತ್ವ ಬೆಳೆಯುತ್ತದೆ. ವ್ಯಕ್ತಿ ಸಾಧಿಸಿದ ನಡೆ, ನುಡಿ, ಯಶಸ್ಸು ಇನ್ನೊಬ್ಬರಿಗೆ ಪ್ರಯೋಜನವಾಗಲಿ ಎಂಬುದೇ ರೋಟರಿಯ ಧ್ಯೇಯ. ಸೇವಾ ಸಂಸ್ಥೆಗಳು ವ್ಯಕ್ತಿಯ ಆತ್ಮ ಗೌರವವನ್ನು ಹೆಚ್ಚಿಸಲಿದ್ದು, ಸಾರ್ವಜನಿಕ ಸಂಪರ್ಕಕ್ಕೆ ಸೇವಾ ಸಂಸ್ಥೆಗಳು ಉತ್ತಮ ವೇದಿಕೆ. ಇಂದು ಅಜ್ಞಾನ, ಬಡತನ, ನಿರುದ್ಯೋಗ ದೂರವಾಗಿವೆ ಎಂದರು.  ಕಾರ್ಕಳ ಅನಂತಶಯನದ ಹೊಟೇಲ್ ಪ್ರಕಾಶನ ಮಾಲೀಕ ಬೋಳ ರಾಘವ ಶೆಟ್ಟಿ ರೋಟರಿಯ ಸಮಾಜ ಸೇವಾ ಕಾರ್ಯಗಳಿಗೆ ರೂ.50 ಸಾವಿರ ದೇಣಿಗೆ ಹಸ್ತಾಂತಿಸಿದರು.  ಈ ಸಂದರ್ಭದಲ್ಲಿ ವಲಯ ಸಹಾಯಕ ಗವರ್ನರ್ ಪಿ.ಮನೋಹರ್ ರಾವ್ ಎ 2012-13ನೇ ಸಾಲಿನ ಮೋಹನ್ ಪಡಿವಾಳ್ ಮತ್ತು ಅವರ ನೂತನ ಸಂಪುಟ ಸದಸ್ಯರ ಪದವಿ ಪ್ರದಾನ ನೆರವೇರಿಸಿದರು. ವಲಯ ಸೇನಾನಿ ವಿನ್ಸೆಂಟ್ ಸಲ್ಡಾನಾ ಕ್ಲಬ್ ಪತ್ರಿಕೆ ಬಿಡುಗಡೆಗೊಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿಕಲಚೇತನರಿಗೆ ಕೃತಕ ಕಾಲು ನೀಡಲಾಯಿತು.  ಕಾರ್ಯದರ್ಶಿ ಟಿ.ಸಿ.ಶಾಂತಪ್ಪ ವರದಿ ಓದಿದರು. ನೂತನ ಕಾರ್ಯದರ್ಶಿ ಶೇಖರ್, ಕೋಶಾಧಿಕಾರಿ ಸುರೇಶ್ ನಾಯಕ್, ಸಾರ್ಜಂಟ್ ಎಸ್.ವಿ.ಉಪಾದ್ಯಾಯ, ಹಿರಿಯರಾದ ರಾಜಗೋಪಾಲಾಚಾರ್, ಎ.ಕೆ.ಆಚಾರ್, ಬಾಲಕೃಷ್ಣ ಶೆಟ್ಟಿ, ಭರತ್‌ರಾಜ್, ಎಂ.ಎನ್ ಧನಕೀರ್ತಿ, ಹರ್ಷಿಣಿ ವಿಜಯರಾಜ್, ಜ್ಯೋತಿ ಪದ್ಮನಾಭ್, ಕರ್ತವ್ಯ, ಆತ್ಮಿಕಾ, ಅನ್ವಿಕಾ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.