`ಸಮಾಧಾನಿಗಳೇ ಸದಾ ಸುಖಿಗಳು'

7

`ಸಮಾಧಾನಿಗಳೇ ಸದಾ ಸುಖಿಗಳು'

Published:
Updated:

ಹುಬ್ಬಳ್ಳಿ: `ರೊಟ್ಟಿ, ಚಟ್ನಿ ತಿಂದು ಚಾಪೆ ಮೆಲೆ ಮಲಗಿದ್ದರೂ ಸಮಾಧಾನಿಯಾ ಗಿದ್ದರೆ ಸುಖಿ. ಸುಪ್ಪತ್ತಿಗೆ ಮೇಲೆ ಮಲಗಿದ್ದರೂ ಅಸಮಾಧಾನಿಯಾಗಿದ್ದರೆ ಸುಖಿ ಯಲ್ಲ' ಎಂದು ಹೆಬ್ಬಳ್ಳಿಯ ಚೈತನ್ಯ ಆಶ್ರಮದ ದತ್ತಾವಧೂತರು ಅಭಿಪ್ರಾ ಯಪಟ್ಟರು.ನಗರದ ಭಗವಾನ ಸೇವಾ ಸಮಿತಿ ಯು ಸ್ಟೇಷನ್ ರಸ್ತೆಯಲ್ಲಿಯ ಈಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ವಾಗಿ 21 ದಿನಗಳವರೆಗೆ ನಡೆದ ಮಹಾ ಮೃತ್ಯುಂಜಯ ಮಂತ್ರ ಅನುಷ್ಠಾನ ಹಾಗೂ ಯಾಗದ ಸಮಾರೋಪ ಸಮಾ ರಂಭದಲ್ಲಿ ಪೂರ್ಣಾ ಹುತಿಯಲ್ಲಿ ಭಾಗ ವಹಿಸಿ ನಂತರ ನಡೆದ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಶುಕ್ರವಾರ ಅವರು ಮಾತನಾಡಿದರು.`ಬೇಕಾದಷ್ಟು ದುಡ್ಡು ಗಳಿಸಬಹುದು. ಆದರೆ ಸಮಾಧಾನ ಬೇಕೆಂದರೆ ಭಗ ವಂತನ ಮೊರೆ ಹೋಗಬೇಕು. ಮನುಷ್ಯ ಅಸಮಾಧಾನಿಯಾಗಿದ್ದರೆ ಪರಮಾತ್ಮನ ಬಳಿ ಹೋಗಬೇಕು. ಶಾಂತಿ ಹಾಗೂ ಸಮಾಧಾನ ಸಿಗಬೇಕೆಂದರೆ ಭಗವಂತನ ಸ್ಮರಣೆ ಮಾಡಬೇಕು. ಭಗವಂತ ಸರಳವಾಗಿ ಹೇಳುತ್ತಾನೆ- ನನ್ನ ಕಡೆ ನೋಡಿ, ನಿಮ್ಮ ಕಡೆ ನೋಡುವೆ ಎಂದು. ಹೀಗಾಗಿ ಆತನನ್ನು ಒಲಿಸಿಕೊಳ್ಳಲು ನಿರಂತರವಾಗಿ ಪ್ರಾರ್ಥಿಸ ಬೇಕು' ಎಂದು ಅವರು ಸಲಹೆ ನೀಡಿದರು.`ಸಮಾಜದಲ್ಲಿ ಹೋಮ-ಹವನಗಳು ನಡೆಯು ತ್ತಿರಬೇಕು. ಈಶ್ವರ ದೇವಸ್ಥಾನ ದಲ್ಲಿ 21 ದಿನಗಳ ವರೆಗೆ ಅನುಷ್ಠಾನ ನಡೆದಿದ್ದು ಸ್ತುತ್ಯಾರ್ಹ. ಇದರಿಂದ ಜನ ರಲ್ಲಿ ಆಧ್ಯಾತ್ಮಿಕ ಒಲವು ಮೂಡುತ್ತದೆ. ಜೊತೆಗೆ ಜೀವನ ಸಾರ್ಥಕತೆಗೆ ಭಗ ವಂತನಿಗೆ ಶರಣು ಎನ್ನಬೇಕು ಹಾಗೂ ಶರಣಾಗಬೇಕು. ಮನೆಗಳಲ್ಲಿ ಸ್ತೋತ್ರ ಪಠಣ ಹಾಗೂ ಉಪಾಸನೆ ನಡೆಯ ಬೇಕು' ಎಂದು ಕಿವಿಮಾತು ಹೇಳಿದರು.ಮುಖ್ಯ ಅತಿಥಿಗಳಾಗಿ ಶಾಸಕ ವೀರಭದ್ರಪ್ಪ ಹಾಲಹರವಿ, ಕರ್ನಾಟಕ ಬಾಲಕವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಈಶ್ವರ ದೇವ ಸ್ಥಾನ ಟ್ರಸ್ಟ ಅಧ್ಯಕ್ಷ ರಾಜಾ ದೇಸಾಯಿ, ಭಗವಾನ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಜರತಾರಘರ ಭಾಗವಹಿ ಸಿದ್ದರು. ಎಂ.ಬಿ.ನಾತು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ಸಂಕಲ್ಪ, ಗಣಹೋಮ ಹಾಗೂ ಗಣಪತಿ ಪೂಜೆ ನಡೆಯಿತು. ನಂತರ ನಡೆದ ನವಗ್ರಹ ಹೋಮದಲ್ಲಿ 28 ಆಹುತಿಗಳನ್ನು ಬಳಸಲಾಯಿತು.`ಅಮೃತ ಸಮ್ಮಿದ, ವಟ, ಎಳ್ಳು, ಹಾಲು, ಗರಿಕೆ, ಪಾಯಸ ಹಾಗೂ ತುಪ್ಪ ಹೀಗೆ ಏಳು ದ್ರವ್ಯಗಳನ್ನು ಬಳಸಿ ಮಹಾ ಮೃತ್ಯುಂಜಯ ಹವನಕ್ಕೆ ಒಟ್ಟು 10,000 ಆಹುತಿ ಕೊಡಲಾಯಿತು. ಇದು 21 ದಿನಗಳವರೆಗೆ ನಡೆದ ಒಂದು ಲಕ್ಷ ಜಪದ ದಶಾಂಶ ಹವನ' ಎಂದು ಹವನ ಪೂರೈಸಿದ ಗೋಕರ್ಣದ ನಿರಂಜನಮೂರ್ತಿ ತಿಳಿಸಿದರು.ಅವರೊಂದಿಗೆ ಗೋಕರ್ಣದ ಗಣಪತಿ ಜೋಶಿ, ಸುಬ್ರಾಯ ಭಟ್, ನಗರದ ಪ್ರಸನ್ನ ಭಟ್ ಹಾಗೂ ಈಶ್ವರ ದೇವಸ್ಥಾನದ ಅರ್ಚಕ ಮಂಜುನಾಥ ಭಟ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry