`ಸಮಾನತೆಗೆ ಹೋರಾಡಿದ ಅಂಬೇಡ್ಕರ್'

7

`ಸಮಾನತೆಗೆ ಹೋರಾಡಿದ ಅಂಬೇಡ್ಕರ್'

Published:
Updated:

ಕಾರ್ಕಳ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಜನರ ಧ್ವನಿಯಾಗಿ ಸಹೋದರತೆ, ಸಮಾನತೆ ಗಾಗಿ ಹೋರಾಡಿದವರು ಎಂದು ನಗರ ಠಾಣೆಯ ಪಿಎಸ್‌ಐ ಪಿ.ಪ್ರಮೋದ ಕುಮಾರ್  ಇಲ್ಲಿ ತಿಳಿಸಿದರು.  ಇಲ್ಲಿನ ಚೇತನಾ ವಿಶೇಷ ಮಕ್ಕಳ ಶಾಲೆಯ ಸಭಾಭವನದಲ್ಲಿ ಗುರುವಾರ ತಾಲ್ಲೂಕು ಡಾ.ಬಿ.ಆರ್. ಅಂಬೇಡ್ಕರ್ ಸಮಾಜ ಸೇವಾ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 56ನೇ ಪರಿನಿರ್ವಾಣ ದಿನಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ದೇಶದ ಸಂವಿಧಾನವನ್ನು ತಂದುಕೊಟ್ಟ ಧೀಮಂತ ನಾಯಕ ಎಂದರು.ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಅಜ್ಮತ್ ಆಲಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯನು ಜೀವನದಲ್ಲಿ ಅರಿತು ಸಹೋದರತೆಯೊಂದಿಗೆ ಬಾಳಿ ಬದುಕು ವುದೇ ನಮ್ಮೆಲ್ಲರ ಗುರಿಯಾಗಬೇಕು ಎಂದರು.  ಅಂಬೇಡ್ಕರ್ ಸೇವಾ ಸಮಿತಿಯ ಗೌರವಾಧ್ಯಕ್ಷ ಗಣೇಶ ರಾಣೆ ಅಂಬೇಡ್ಕರ್ ಅವರ ಬದುಕಿನ ಮಹತ್ವದ ಘಟನೆಗಳನ್ನು ಮಂಡಿಸಿದರು.ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಎನ್.ಬಿ.ಬಾಬು. ಧರ್ಮಣ್ಣ ನಿಟ್ಟೆ, ಚೇತನಾ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷೆ ಗೀತಾ ಬಿ ಪೈ, ಸಂಚಾಲಕಿ ಶಶಿಕಲಾ ಮಣಿಯಾಣಿ, ಪುರಸಭಾ ಸದಸ್ಯೆ ಮಾಲಿನಿ ಪೈ, ನಮಿತಾ ಬೋಳ ಮತ್ತಿತರರು ಇದ್ದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಚೇತನಾ ವಿಶೇಷ ಶಾಲಾ ಮಕ್ಕಳಿಗೆ ವಿತರಿಸಲಾ ಯಿತು.  ಹೇಮಲತಾ ಸ್ವಾಗತಿಸಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry