ಗುರುವಾರ , ಮೇ 6, 2021
31 °C

ಸಮಾನತೆ ಅಂಬೇಡ್ಕರ್ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಸ್ವಾಭಿಮಾನ ಮತ್ತು ಸಮಾನತೆಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬದುಕಿನುದ್ದಕ್ಕೂ ಹೋರಾಟ ಮಾಡಿದ್ದರು. ಸಮಾಜದಲ್ಲಿ ಸ್ವಾಭಿಮಾನ ಹಾಗೂ ಸಮಾನತೆ ಇರಬೇಕು ಎಂಬುದು ಅವರ ಆಶಯ ವಾಗಿತ್ತು~ ಎಂದು ವಿಚಾರವಾದಿ ಪ್ರೊ. ಜಿ.ಕೆ.ಗೋವಿಂದರಾವ್ ಹೇಳಿದರು.ಮಹಾರಾಜ ಕಾಲೇಜು ಶತಮಾ ನೋತ್ಸವ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಅಂಬೇಡ್ಕರ್ ಅವರು ತಮ್ಮ ಬುದ್ಧಿಶಕ್ತಿ, ಚೈತನ್ಯ, ಹೋರಾಟವನ್ನು ಸಮಾನತೆಗೆ ಮೀಸಲಿಟ್ಟಿದ್ದರು.ಜಾತಿ, ಭಾಷೆ, ಪಂಗಡಗಳನ್ನು ಮೀರಿ ಮನುಷ್ಯ ಬೆಳೆಯಬೇಕು ಎಂದು ಕನಸು ಕಂಡಿದ್ದರು. ಸ್ವಾಭಿಮಾನಿ ಮನುಷ್ಯನಿಗೆ ತನ್ನ ಪಕ್ಕದಲ್ಲಿರುವ ವ್ಯಕ್ತಿಯ ಬಗ್ಗೆಯೂ ಗೌರವ ಇರಬೇಕು ಎಂದು ಹಂಬಲಿಸುತ್ತಿದ್ದರು. ಅಂತಹ ಮಹಾನ್ ನಾಯಕನ ದಿನಾಚರಣೆಯಂದು ಎಲ್ಲರೂ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು~ ಎಂದು ಹೇಳಿದರು.`ಭಾರತ ದೇಶದಲ್ಲಿ ಶೇ 15ರಷ್ಟು ಜನರು ಮಾತ್ರ ಮೂಲ ಸೌಲಭ್ಯಗಳನ್ನು ಹೊಂದಿದ್ದಾರೆ. ಇನ್ನುಳಿದ ಶೇ 85ರಷ್ಟು ಜನ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಮಠಧರ್ಮ ಮತ್ತು ಅರಮನೆ ರಾಜಕೀಯವೇ ಕಾರಣ. ಆಯಾ ರಾಜರ ಆಡಳಿತ ಅವಧಿಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾಗಿ ಜನಸಾಮಾನ್ಯರು ಹೇಗೆ ಜೀವನ ಸಾಗಿಸುತ್ತಿದ್ದರು ಎಂಬುದು ಮುಖ್ಯವೇ ಹೊರತು ರಾಜರ ಆಡಳಿತವಲ್ಲ. ಆದರೆ, ಅಂದಿನ ರಾಜರು ತಮ್ಮ ಬಗ್ಗೆಯೇ ಹೆಚ್ಚು ಪ್ರಚಾರ ಕೈಗೊಂಡು ಬಡವರನ್ನು ಬಡವರಾಗಿಯೇ ಉಳಿಸಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದರು.ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಬಿ.ರಾಮಚಂದ್ರ, ಕಾಲೇಜಿನ ಆಡಳಿತಾಧಿಕಾರಿ ಡಾ.ಸಿ.ಎಸ್. ರಾಮನಾರಾಯಣ, ಕಾಲೇಜಿನ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಎಚ್.ಆರ್. ಚೇತನ, ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ರಾಮಸ್ವಾಮಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.