ಬುಧವಾರ, ಏಪ್ರಿಲ್ 14, 2021
24 °C

ಸಮಾನತೆ ಪ್ರಧಾನ ಸಮಾಜಕ್ಕೆ ಮಾವೊವಾದಿ ಚಳವಳಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಮಾನತೆ ಪ್ರಧಾನವಾದ ಸಮಾಜ ನಿರ್ಮಾಣಕ್ಕೆ ಮಾವೊವಾದಿ ಚಳವಳಿಯ ಅಗತ್ಯವಿದೆ ಎಂದು ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಟರು.ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಮ್ಮ ಹಕ್ಕು ವೇದಿಕೆ ಹಾಗೂ ಚಾರು ಪ್ರಕಾಶನ ಆಯೋಜಿಸಿದ್ದ ಶ್ರೀಧರ್ ಅವರ `ಭಾರತದ ಕ್ರಾಂತಿ ಮತ್ತು ಮಾವೊವಾದಿ ಚಳವಳಿ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಸಮಾನತೆ ಎಂಬುದು ಸಂವಿಧಾನ ಬದ್ಧವಾಗಿದ್ದು, ಸಂವಿಧಾನ ನೀಡಿರುವ ಭರವಸೆಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಸಮಾನತೆ ಪ್ರಧಾನವಾದ ರಾಜ್ಯ ಸ್ಥಾಪಿಸಲು ಮಾವೊವಾದಿ ಚಳವಳಿಯ ಅವಶ್ಯಕತೆಯಿದೆ. ಸಾಮಾನ್ಯವಾಗಿ ಸಾಧ್ಯವಾಗದ್ದನ್ನು ಸಾಧ್ಯವಾಗುವಂತೆ ಮಾಡಲು ಮಾವೋವಾದಿ ಚಳವಳಿಯಿಂದ ಸಾಧ್ಯ. ಮಾವೊವಾದಿ ಚಳವಳಿ ಜನರ ಮೇಲಿನ ಬದ್ಧತೆಯಿಂದ ನಡೆಯುತ್ತಿದೆ ಎಂದರು.ಸಾಹಿತಿ ಡಾ.ಎಚ್.ಎಸ್. ಅನುಪಮಾ ಮಾತನಾಡಿ, ಎಲ್ಲಾ ಕ್ರಾಂತಿಗಳು ಕನಿಷ್ಠ ನೆಮ್ಮದಿಯ  ಆಶಯದಿಂದ ನಡೆದಿವೆ ಹಾಗೂ ನಡೆಯುತ್ತಿವೆ. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು, ಭೂಸುಧಾರಣೆ ಕಾನೂನು ರಚಿಸಿ `ಉಳುವವನೇ ಭೂಮಿಯ ಒಡೆಯ~ ಎಂಬ ನಿಯಮ ಜಾರಿ ಮಾಡಿದ್ದು, ಯಾವ ಚಳವಳಿಗೂ ಕಡಿಮೆ ಇರಲಿಲ್ಲ. ಎಷ್ಟೇ ಲೋಪಗಳಿದ್ದರೂ ಸಹ ಲಿಖಿತ ರೂಪದಲ್ಲಿರುವ ಸಂವಿಧಾನದ ಅಂಶಗಳು ಆಚರಣೆಗೆ ಬಂದರೆ ಅದು ಯಾವ ಕ್ರಾಂತಿಗೂ ಕಡಿಮೆ ಇಲ್ಲ ಎಂದರು.ನಮ್ಮ ರಾಷ್ಟ್ರದಲ್ಲಿ ಇರುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು, ಈ ಬಗ್ಗೆ ಅರಿವು ಮೂಡಿಸುವುದು ಸಹ ಹೋರಾಟವೇ ಆಗಿದೆ ಎಂದರು.ಶ್ರಿಧರ್ ಅವರ ಭಾರತದ ಕ್ರಾಂತಿ ಮತ್ತು ಮಾವೊವಾದಿ ಚಳವಳಿ ಪುಸ್ತಕವನ್ನು ಚಿಂತಕ ಶ್ರೀಕಂಠ ಕೂಡಿಗೆ ಬಿಡುಗಡೆ ಮಾಡಿದರು.     ವಕೀಲ ಜಿ.ಎಸ್. ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಮ್ಮಹಕ್ಕು ವೇದಿಕೆ ಅಧ್ಯಕ್ಷ ಕೆ.ಪಿ. ಶ್ರೀಪಾಲ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.