ಮಂಗಳವಾರ, ನವೆಂಬರ್ 12, 2019
26 °C

ಸಮಾನ ಅಭಿವೃದ್ಧಿ: ಡಾ.ಸುಧಾಕರ್

Published:
Updated:

ಚಿಂತಾಮಣಿ: ಕೆಲವರು ರಾಜಕೀಯಕ್ಕಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡ ಮಹಮದ್ ಇನಾಯುತುಲ್ಲಾ ಟೀಕಿಸಿದರು.

ತಾಲ್ಲೂಕಿನ ಹಾದಿಗೆರೆ ಗ್ರಾಮದಲ್ಲಿ ಮಂಗಳವಾರ ಪಕ್ಷೇತರ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಕ್ಷೇತ್ರದ ಎಲ್ಲ ಭಾಗಗಳಲ್ಲಿ ಸಮಾನ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಕೀಯ ಮಾಡಿಲ್ಲ. ಇನ್ನೂ ಕೆಲವು ಕಾಮಗಾರಿ ಪ್ರಾರಂಭವಾಗಬೇಕಿದ್ದವು. ಚುನಾವಣೆ ಘೋಷಣೆಯಿಂದ ಸ್ಥಗಿತಗೊಂಡಿವೆ  ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಸುಬ್ಬಾರೆಡ್ಡಿ, ಜಿ.ಪಂ. ಸದಸ್ಯೆ ಉಮಾದೇವಿ ಸತ್ಯನಾರಾಯಣರೆಡ್ಡಿ, ಎ.ಪಿ.ಎಂ.ಸಿ. ಸದಸ್ಯ ಗೋಪಾಲರೆಡ್ಡಿ, ಟೊಮೆಟೊ ಶಬೀರ್, ಚೌಡರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.ಕನ್ನಡದಲ್ಲಿ ಪ್ರಚಾರಕ್ಕೆ ಆಗ್ರಹ

ಚಿಂತಾಮಣಿ: ಚುನಾವಣಾ ಪ್ರಚಾರ ಹಾಗೂ ಬಹಿರಂಗ ಸಭೆಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ವಂದೇ ಮಾತರಂ ಸಂಘಟನೆ ಒತ್ತಾಯಿಸಿದೆ.ಕೆಲವು ಅಭ್ಯರ್ಥಿಗಳು ಹಾಗೂ ಮುಖಂಡರು ಅನ್ಯ ಭಾಷೆಯಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾರೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ರವಿ, ತಾಲ್ಲೂಕು ಅಧ್ಯಕ್ಷ ಕೆ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ನಾಗೇಶ್, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಅವರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)