ಸಮಾವೇಶಕ್ಕೆ ಟೀಕೆ

7

ಸಮಾವೇಶಕ್ಕೆ ಟೀಕೆ

Published:
Updated:

ಬೆಂಗಳೂರು: ಧಾರ್ಮಿಕ ಅಲ್ಪಸಂಖ್ಯಾತರಿಗೆ  ಒಳ ಮೀಸಲಾತಿ ಕಲ್ಪಿಸುವುದನ್ನು ವಿರೋಧಿಸಿ, ಬಿಜೆಪಿ `ಒಬಿಸಿ~ ವರ್ಗಗಳ ಸಮಾವೇಶ ಆಯೋಜಿಸಿರುವುದನ್ನು ಕಾಂಗ್ರೆಸ್ ಗುರುವಾರ ಟೀಕಿಸಿದೆ. `ಒಬಿಸಿ ವರ್ಗಗಳ ಕುರಿತು ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ~  ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಜೆಡಿಎಸ್, ಬಿಜೆಪಿ, ಪಕ್ಷೇತರ ಶಾಸಕರಲ್ಲಿ ಕೆಲವರು ಕಾಂಗ್ರೆಸ್ ಸೇರಲು ಆಸಕ್ತಿ ತೋರಿದ್ದಾರೆ ಎಂದರು.  ಆದರೆ ಆ ಶಾಸಕರು ಯಾರು ಎಂಬುದನ್ನು ಬಹಿರಂಗಪಡಿಸಲಿಲ್ಲ. ಕೆಪಿಸಿಸಿ ಸರ್ವಸದಸ್ಯರ ಸಭೆ ಶನಿವಾರ ನಡೆಯಲಿದ್ದು,  ರಾಜ್ಯದ ಆರ್ಥಿಕ ಸ್ಥಿತಿ ಸೇರಿದಂತೆ  ಅನೇಕ ವಿಚಾರಗಳ  ಚರ್ಚೆ ನಡೆಯಲಿದೆ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry