ಸೋಮವಾರ, ಜೂನ್ 21, 2021
29 °C

ಸಮೀಕ್ಷೆಗೆ ಮಾರ್ಗಸೂಚಿ: ಎಎಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಚುನಾವಣೆ ಸಮೀಕ್ಷೆ ಪ್ರಕಟಿಸುತ್ತಿರುವ ಸಂಘ ಸಂಸ್ಥೆ­ ಹಾಗೂ ಮಾಧ್ಯಮ ಸಂಸ್ಥೆಗಳು ‘ನಿಷ್ಪ್ರಯೋಜಕ ಚಟು­ವ­ಟಿಕೆ’­ಯಲ್ಲಿ ತೊಡಗಿದ್ದು ಇಂತಹ ಸಮೀಕ್ಷೆಗಳ ವಿಶ್ವಾಸಾರ್ಹತೆ ಪ್ರಶ್ನಿ­ಸು­ವಂತಾಗಿದೆ ಎಂದಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಈ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಚುನಾವಣಾ ಆಯೋಗ­ವನ್ನು ಒತ್ತಾಯಿಸಿದೆ.ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಎಎಪಿ ಸಂಚಾಲಕ, ಅರವಿಂದ್‌ ಕೇಜ್ರಿವಾಲ್‌, ‘ಸಂಘ ಸಂಸ್ಥೆಗಳು ಇಲ್ಲವೆ ವಿದ್ಯುನ್ಮಾನ, ಮುದ್ರಣ ಮಾಧ್ಯಮಗಳು ಚುನಾವಣೆಗೆ ಸಂಬಂಧಿಸಿದಂತೆ ಮಾಡು­ತ್ತಿರುವ ವರದಿಗಳು ವಿಶ್ವಾಸಾರ್ಹತೆಯಿಂದ ಕೂಡಿಲ್ಲ, ಹಣದಾಸೆಗೆ ಜನಾಭಿಪ್ರಾಯ ತಿರುಚಲಾಗುತ್ತಿದೆ, ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಬೇಕಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.