ಸಮುದಾಯದಿಂದ ಟ್ಯಾಗೋರ್ ಉತ್ಸವ

7

ಸಮುದಾಯದಿಂದ ಟ್ಯಾಗೋರ್ ಉತ್ಸವ

Published:
Updated:

ಕವಿ ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮ ದಿನೋತ್ಸವವನ್ನು ‘ಸಮುದಾಯ’ ಸಂಘಟನೆ ಫೆ. 12 ರಿಂದ 16ರ ವರೆಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ವಿಶಿಷ್ಟವಾಗಿ ಆಚರಿಸಲಿದೆ.

ಕೋಲ್ಕತ್ತದ ಶುಭಪ್ರಸಾದ ನಂದಿ ಮಜುಂದಾರ್ ಮತ್ತು ಪೂಬಲಿ ದೇವನಾಥ್ ಅವರು ರವೀಂದ್ರ ಸಂಗೀತದ ಮೂಲಕ ಚಾಲನೆ ನೀಡಲಿದ್ದಾರೆ.

ರಾಷ್ಟ್ರೀಯ ವಿಚಾರ ಸಂಕಿರಣ, ಟ್ಯಾಗೋರ್ ಚಿತ್ರಿಸಿದ್ದ ಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರ, ಬಂಗಾಳಿ ನಾಟಕ, ಕವಿಗೋಷ್ಠಿ, ಮಣಿಪುರಿ ನೃತ್ಯಗಳು ಕಾರ್ಯಕ್ರಮಕ್ಕೆ ಕಳೆ ಕಟ್ಟಲಿವೆ. ಮಾಹಿತಿಗೆ: 94481 09706.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry