ಸಮುದಾಯದ ಪ್ರಗತಿಗೆ ಶ್ರಮಿಸಿ

7

ಸಮುದಾಯದ ಪ್ರಗತಿಗೆ ಶ್ರಮಿಸಿ

Published:
Updated:

ಮಾಲೂರು:  `ವಾಲ್ಮೀಕಿ ಸಮುದಾ ಯದ ಮುಖಂಡರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ತೊರೆದು ಸಮುದಾ ಯದ ಪ್ರಗತಿಗಾಗಿ ಶ್ರಮಿ ಸುವಂತೆ~ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ರಾಜ್ಯಾಧ್ಯಕ್ಷ ನರಸಿಂಹ ನಾಯಕ ಹೇಳಿದರು.ವಾಲ್ಮೀಕಿ ನಾಯಕ ಸಮುದಾಯದ ತಾಲ್ಲೂಕು ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ಕೃಷಿಕ ಸಮಾಜ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದ ಬಡ ಜನತೆ ಸರ್ಕಾರದ ಸವಲತ್ತು  ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲು ಮಹಾಸಭಾ ಸಹಕರಿಸುತ್ತದೆ ಎಂದು ಹೇಳಿದರು.ಸಮುದಾಯದ ಮುಖಂಡರು ಸರ್ಕಾರದಿಂದ ಬರುವ ಸವಲತ್ತು ಕುರಿತು ಜನತೆಯಲ್ಲಿ ಅರಿವು ಮೂಡಿಸ ಬೇಕು.  ಮುಖಂಡರು ವೈಮನಸ್ಸು ತೊರೆದು ಒಗ್ಗಟ್ಟಾಗಿ ಪಕ್ಷ ಭೇದ ಮರೆತು ಸಮುದಾಯಕ್ಕೆ ಅನ್ಯಾಯ ವಾದಾಗ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಅ.11 ರಂದು ನಡೆಯುವ ವಾಲ್ಮೀಕಿ ಜಯಂತಿಯಲ್ಲಿ  ಸಮುದಾಯದ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದರು.  ಇದೇ ವೇಳೆ ವಾಲ್ಮೀಕಿ ಮಹಾಸಭೆಯ ತಾತ್ಕಾಲಿಕ ಕವಲು ಸಮಿತಿ ಆಯ್ಕೆ ಮಾಡಲಾಯಿತು.  ಮಂಜುನಾಥ್, ಟೇಕಲ್ ರಮೇಶ್, ಲಕ್ಕೂರು ಸೋಮು ಮತ್ತು ಕಸಬಾ ಶಿವಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಸಲಹೆಗಾರರಾಗಿ ನಾಗ ರಾಜ್, ಮುನಿಯಪ್ಪ, ವೆಂಕಟೇಶಪ್ಪ, ಕಾರ್ಯ ನಿರ್ವಾಹಕರಾಗಿ ಗಣೇಶ್ ಮತ್ತು ಡಾ.ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಲಾಯಿತು.ರಾಜ್ಯ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ನಿರ್ದೇಶಕ ರಾದ ಎಂ. ಉಮಾಪತಿ, ವೆಂಕಟೇಶ್‌ಮೂರ್ತಿ, ಗಣೇಶ್, ನಾಗರಾಜ್, ಶಿವಕುಮಾರ್, ಕಷ್ಣಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry