ಸಮುದಾಯದ ಸಹಕಾರ ಇರಲಿ: ಬಿಇಒ

ಸೋಮವಾರ, ಜೂಲೈ 15, 2019
25 °C

ಸಮುದಾಯದ ಸಹಕಾರ ಇರಲಿ: ಬಿಇಒ

Published:
Updated:

ಯಳಂದೂರು:`ಪ್ರತಿ ಸಮುದಾಯ ಗಳೂ ಶಾಲೆಗಳಲ್ಲಿ ವ್ಯಾಸಂಗ ಮಾಡುವ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಾಲೆಗಳ ಆಗು-ಹೋಗುಗಳನ್ನು ತಿಳಿದು ಕೊಂಡರೆ ಗುಣಮಟ್ಟದ ಶಿಕ್ಷಣ ಲಭಿಸಲು ನೆರವಾಗುತ್ತದೆ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಮಂಜುನಾಥ್ ತಿಳಿಸಿದರು.ಅವರು ಪಟ್ಟಣ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿ ಕೊಂಡಿದ್ದ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಿಕ್ಷಣ ಮಟ್ಟವನ್ನು ಸುಧಾರಿಸುವಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿ ಸಲು ಹೊಸ ಹೊಸ ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ 6 ರಿಂದ 14 ವರ್ಷ ವಯೋಮಾನದ ಎಲ್ಲಾ ಮಕ್ಕ ಳಿಗೂ ಕಡ್ಡಾಯ ಶಿಕ್ಷಣ ನೀಡಬೇಕು. ಇದನ್ನು ನೀಡುವಾಗ ಗುಣಾತ್ಮಕ ಶಿಕ್ಷಣಕ್ಕೆ ಪ್ರಾಮಾಣಿಕವಾಗಿ ಒತ್ತು ನೀಡುವ ಅನಿವಾರ್ಯತೆ ಇರುವುದಾಗಿ ತಿಳಿಸಿದರು.ನಂತರ ಪ್ರಮಾಣ ವಚನ ಬೋಧಿಲಾಯಿತು. ಪಟ್ಟಣದ ಈ ಶಾಲೆಗೆ ಜಿಲ್ಲಾ ಮಟ್ಟದ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಲಭ್ಯವಾಗಿರುವುದಕ್ಕೆ ಅಭಿನಂದಿಸಲಾಯಿತು. ಇದೇ ಸಂದರ್ಭ ದಲ್ಲಿ ದಾನಿಗಳಾದ ನಾಗರಾಜು, ಹೆಚ್.ವಿ. ಗೋಪಾಲಕೃಷ್ಣ, ಸಿ. ಲಿಗೋರಿ, ಶಿವಕುಮಾರ್, ಚಂದ್ರು, ಶ್ರೀನಿವಾಸ ನಾಯಕ, ನಾಗಣ್ಣ ರವರು ಶಾಲೆಗೆ 25 ಸಾವಿರ ದೇಣಿಗೆ ಹಾಗೂ ಷೂ, ಸಮವಸ್ತ್ರವನ್ನು ದಾನವಾಗಿ ನೀಡಿದರು.ಮುಖಂಡ ಉಮಾಶಂಕರ್, ತಹಶೀಲ್ದಾರ್ ಶಿವನಾಗಯ್ಯ, ಪ.ಪಂ. ಆಧ್ಯಕ್ಷ ರಂಗಸ್ವಾಮಿ ಮಾತನಾಡಿದರು. ಹೊಸ ನಲಿ ಕಲಿ ಕೊಠಡಿಯನ್ನು ಪಟ್ಟಣ ಪಂಚಾಯಿತಿ ಸದಸ್ಯೆ ನಾಗರತ್ನಮಹೇಶ್ ಉದ್ಘಾಟಿಸಿದರು.ಉಪಾಧ್ಯಕ್ಷೆ ಚಿನ್ನಮ್ಮಮರಯ್ಯ, ಅಮಿತ್, ಎಸ್‌ಡಿಎಂಸಿ ಅಧ್ಯಕ್ಷೆ ರೂಪ, ಮುಖ್ಯ ಶಿಕ್ಷಕಿ ಎಂ.ಕೆ. ಮಂಜುಳಾ ಶಿಕ್ಷಕರಾದ ನಾಗರತ್ನ, ಪುಟ್ಟರಾಜಮ್ಮ, ಸಂಜೀವ ಮೂರ್ತಿ ಇತರರು ಜೊತೆಯಲ್ಲಿದ್ದರು.ಗಣಿಗನೂರಲ್ಲೂ ಆಚರಣೆ: ತಾಲ್ಲೂಕಿನ ಗಣಿಗನೂರು ಸೇರಿದಂತೆ ಹಲವು ಶಾಲೆಗಳಲ್ಲಿ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಆಚರಿಸ ಲಾಯಿತು. ದಾನಿಗಳಾದ ಕೆ.ವಿ. ರಂಗನಾಥರಾವ್ ಶಾಲೆಗೆ ಪಿಠೋಪಕರಣಗಳನ್ನು ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಸಿದ್ದಮ್ಮ ಬಸವಯ್ಯ, ಸಣ್ಣ ನಾಯಕ, ಮಹೇಂದ್ರ, ಮುಖ್ಯ ಶಿಕ್ಷಕ ಎ.ಎನ್. ರಾಮನಾಥನ್ ಶಿಕ್ಷಕರಾದ ಡಿ. ಶಾಂತರಾಜು, ಎಂ. ರವಿ, ಕೆ. ವಿಜಯಲಕ್ಷ್ಮಿ, ಎ. ರತ್ನಕುಮಾರಿ, ಆರ್. ಅಶ್ವಿನಿ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry