ಸಮುದಾಯದ ಸಹಭಾಗಿತ್ವ ಅಗತ್ಯ

7

ಸಮುದಾಯದ ಸಹಭಾಗಿತ್ವ ಅಗತ್ಯ

Published:
Updated:

ಯಲಹಂಕ: ಮಕ್ಕಳ ಲಾಲನೆ ಪಾಲನೆ ಮಾಡುವುದರ ಜೊತೆಗೆ ಸಮಾಜದಲ್ಲಿ ಗುರುತರವಾದ ಜವಾಬ್ದಾರಿಗಳನ್ನು ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ  ಸಮುದಾಯದ ಸಹಭಾಗಿತ್ವ ಹಾಗೂ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.ಇಲ್ಲಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಲಾಖೆಯ ಜಂಟಿ ಉಪನಿರ್ದೇಶಕ ಮುನಿರೆಡ್ಡಿ, ಜಿಪಂ ಸದಸ್ಯೆ ವಾಣಿಶ್ರೀ ವಿಶ್ವನಾಥ್, ಬಿಬಿಎಂಪಿ ಸದಸ್ಯರಾದ ವೈ.ಎನ್.ಅಶ್ವಥ್, ಕೆ.ವಿ. ಯಶೋಧಾ ರವಿಶಂಕರ್, ಎಂ.ಮುನಿರಾಜು, ಕೆಂಪೇಗೌಡ, ಇಲಾಖೆಯ ನಗರ ಜಿಲ್ಲಾ ಉಪ ನಿರ್ದೇಶಕ ರಮೇಶ್ ಹಾಲಬಾವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry