ಭಾನುವಾರ, ನವೆಂಬರ್ 17, 2019
29 °C

ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ

Published:
Updated:

ಕುಶಾಲನಗರ: ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾದ ಕುಶಾಲನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಯಲಿದ್ದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ರೂ.23 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಕಾಯಕಲ್ಪ ನೀಡಲಾಗುತ್ತಿದೆ.ಈ ಸರ್ಕಾರಿ ಆಸ್ಪತ್ರೆಯು ಹಲವು ಸಮಸ್ಯೆಗಳಿಂದ ಕೂಡಿತ್ತು. ಹೋಬಳಿ ಕೇಂದ್ರವಾದ ಕುಶಾಲನಗರ ಮತ್ತು ಸುತ್ತಮುತ್ತಲ ಗ್ರಾಮಗಳು, ನೆರೆಯ ಹಾಸನ, ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳ ನೂರಾರು ರೋಗಿಗಳು ದಿನನಿತ್ಯ ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ.ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಅನುಕೂಲ ವಾಗುವಂತೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಆರೋಗ್ಯ ಇಲಾಖೆ ಕೈಗೊಂಡಿದೆ.ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ಮೇಲ್ಛಾವಣಿಯಿಂದ ನೀರು ಸೋರುತ್ತಿತ್ತು.ಅನೇಕ ವರ್ಷಗಳಿಂದ ಸುಣ್ಣಬಣ್ಣ ಕಂಡಿರದ ಗೋಡೆಗಳಿಗೆ ಇದೀಗ ಸುಣ್ಣ ಬಣ್ಣದ ಲೇಪನ ಮಾಡಲಾಗುತ್ತಿದೆ. ಆಸ್ಪತ್ರೆಯ ಕಾಯಕಲ್ಪಕ್ಕೆ ಕೆಎಚ್‌ಎಸ್‌ಆರ್‌ಡಿ ಯೋಜನೆಯಡಿ ಈಗಾಗಲೇ ರೂ.23 ಲಕ್ಷ ಬಿಡುಗಡೆಗೊಂಡಿದ್ದು,  ಆಸ್ಪತ್ರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ವಿ.ಪಾರ್ವತಿ ತಿಳಿಸಿದ್ದಾರೆ.ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್ ಸರ್ವಿಸ್, ಚರಂಡಿ ಕಾಮಗಾರಿ, ಗೋಡೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್, ಗೋಡೆಗಳಿಗೆ ಸುಣ್ಣ ಬಣ್ಣ ಹಾಕುವುದು, ಛಾವಣಿಯೆ ಸೀಲಿಂಗ್ ದುರಸ್ತಿ, ನಿರ್ಮಾಣ, ಶೌಚಾಲಯ ದುರಸ್ತಿ, ಮಳೆ ನೀರು ಸೊರಿಕೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)