`ಸಮುದಾಯ ಪಾತ್ರ ಮುಖ್ಯ'

7

`ಸಮುದಾಯ ಪಾತ್ರ ಮುಖ್ಯ'

Published:
Updated:

 


ಕುಕನೂರು: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹಾದೇವಸ್ವಾಮಿ ಹೇಳಿದರು. ವಾರ್ತಾ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ `ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಮುದಾಯದ ಪಾತ್ರ' ವಿಚಾರಸಂಕಿರಣ ಉದ್ಘಾಟಿಸಿ  ಮಾತನಾಡಿದರು.ಆರೋಗ್ಯಕ್ಕೆ ಮಾರಕವಾಗಿದ್ದ ಸಿಡುಬು ಹಾಗೂ ಪೋಲಿಯೋ ರೋಗಗಳನ್ನು ದೇಶದಲ್ಲಿ ಈಗಾಗಲೇ ನಿರ್ಮೂಲನೆ ಮಾಡಲಾಗಿದೆ. ಆದರೆ ಇಂದು ಎಲ್ಲೆಡೆ ವ್ಯಾಪಿಸಿರುವ ಚಿಕುನ್‌ಗುನ್ಯಾ, ಡೆಂಗೆಯಿಂದ ಜನತೆ ತತ್ತರಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಮಾರಣಾಂತಿಕ ರೋಗಗಳನ್ನು ನಿಯಂತ್ರಣಗೊಳಿಸಲು ಹಲವಾರು ಕ್ರಮ ಕೈಗೊಂಡಿದೆ ಎಂದರು.ರೋಗಕ್ಕೆ ಕಾರಣ ಆಗಿರುವ ಸೊಳ್ಳೆಗಳು ಆಗದಂತೆ ತಡೆಗಟ್ಟಬೇಕಾದಲ್ಲಿ ಪ್ರತಿಯೊಬ್ಬರೂ ಮನೆಯ ಹೊರಗೆ ಮತ್ತು ಒಳಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಶಾಂತಬಾಬು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂ, ಡಾ.ನರಸಿಂಗಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿದರು. ಪ್ರಾಚಾರ್ಯ ಕೆ.ಪಿ.ಮುರಡಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಚ್.ಮಾದರ, ಡಾ.ಎಸ್.ಸಿ.ಹಿರೇಮಠ ವೇದಿಕೆಯಲ್ಲಿದ್ದರು. 

ಅನಘಾ ಕುಲಕರ್ಣಿ ಪ್ರಾರ್ಥಿಸಿದರು. ಆರ್.ಪಿ.ರಾಜೂರ ಸ್ವಾಗತಿಸಿದರು. ಎನ್.ಪಾಂಡುರಂಗ ನಿರೂಪಿಸಿದರು. ಎಚ್.ಬಿ.ಹಳೆಗೌಡ್ರ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry