ಸಮುದ್ರಪಾಲಾದ ಶಾರದಾ ಕಟ್ಟೆ

ಉಳ್ಳಾಲ: ಇಲ್ಲಿನ ಮೊಗವೀರಪಟ್ನದಲ್ಲಿ ಸಮುದ್ರದ ಅಲೆಗಳ ಅಬ್ಬರ ಮಂಗಳವಾರ ಹೆಚ್ಚಾಗಿದ್ದು, ಇದರಿಂದ ಒಂದು ಮನೆ ಅಪಾಯದ ಅಂಚಿನಲ್ಲಿದೆ. 15 ವರ್ಷಗಳಿಂದ ಇದ್ದಂತಹ ಶಾರದಾ ಕಟ್ಟೆ ಸಮುದ್ರ ಪಾಲಾಗಿದೆ.
ಕೈಕೋ, ಸುಭಾಷನಗರ, ಕಿಲೇರಿಯಾನಗರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದಿಂದ ಹಾನಿಯಾಗುತ್ತಿತ್ತು. ಇದೀಗ ಮೊಗವೀರಪಟ್ನದಲ್ಲೂ ಸಮುದ್ರ ಕೊರೆತ ಹೆಚ್ಚಾಗಿ ಯಾದವ ಕರ್ಕೇರ ಎಂಬವರ ಮನೆಗೆ ಭಾಗಶ: ಹಾನಿಯಾಗಿದೆ.
15ಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ. ಕಡಲಿನ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಜನಪ್ರತಿನಿಧಿಗಳು ಪ್ರದೇಶಕ್ಕೆ ಭೇಟಿ ನೀಡಿಲ್ಲ. ಪರಿಹಾರ ಕಾರ್ಯವನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಈಜುಗಾರರ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಬೆಲೆಬಾಳುವ ಸಾಮಗ್ರಿಗೆ ಹುಡುಕಾಟ: ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಸ್ಥಳೀಯ ಯುವಕರು ಸಮುದ್ರ ತೀರದಲ್ಲಿ ಬೆಲೆಬಾಳುವ ಸ್ವತ್ತುಗಳು ಬರುವ ನಂಬಿಕೆಯಿಂದ ಸಮುದ್ರದ ಅಬ್ಬರವನ್ನು ಲೆಕ್ಕಿಸದೆ ಹುಡುಕಾಟ ನಡೆಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.