ಸೋಮವಾರ, ಏಪ್ರಿಲ್ 12, 2021
30 °C

ಸಮುದ್ರ ಕೊರೆತಕ್ಕೆ ತೆಂಗು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ (ಉಡುಪಿ ಜಿಲ್ಲೆ): ಇಲ್ಲಿಗೆ ಸಮೀಪದ ಎರ್ಮಾಳು ತೆಂಕ ಹಾಗೂ ಕಟಪಾಡಿ ಸಮೀಪದ ಪಡುಕೆರೆಯಲ್ಲಿ ಭಾನುವಾರ ಕಡಲ್ಕೊರೆತ ಆರಂಭವಾಗಿದೆ. ಎರ್ಮಾಳು ತೆಂಕ ಗ್ರಾಮದ ಎರಡು ಕಡೆ ಕಡಲ್ಕೊರೆತ ತೀವ್ರಗೊಂಡು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.ಸಮುದ್ರ ಕೊರೆತವು  ಮೀನುಗಾರಿಕಾ ರಸ್ತೆಯ ಅಂಚಿನವರೆಗೆ ತಲುಪಿದೆ. ರಸ್ತೆಯು  ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಸ್ಥಳೀಯರು ಆತಂಕಗೊಂಡಿದ್ದಾರೆ.ತೊಟ್ಟಂ ಲಕ್ಷ್ಮೀ ಕೆ.ಶ್ರೀಯಾನ್ ಅವರ ಮನೆಯ ಬಳಿ ಕಳೆದ ವರ್ಷ ಸಮುದ್ರ ಕೊರೆತಕ್ಕೆ ಹಾಕಿದ್ದ ಕಲ್ಲುಗಳು ಭಾನುವಾರ ಸಮುದ್ರದ ಒಡಲು ಸೇರಿದವು.ಸಚಿವ ಪೂಜಾರಿ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರಿನಿವಾಸ ಕಡಲ್ಕೊರೆತ ಪ್ರದೇಶಗಳಿಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮರೋಪಾದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಆದೇಶ ನೀಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.