ಶುಕ್ರವಾರ, ಡಿಸೆಂಬರ್ 13, 2019
27 °C

ಸಮೂಹ ಪ್ರದರ್ಶನದಲ್ಲಿ ಚೆಲ್ಲಿದ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮೂಹ ಪ್ರದರ್ಶನದಲ್ಲಿ ಚೆಲ್ಲಿದ ರಂಗು

ಒಂದೆಡೆ ನಿಸರ್ಗದ ಅಸೀಮ ಸೌಂದರ್ಯ ಎತ್ತಿಹಿಡಿಯುವ ರಿಯಲಿಸ್ಟಿಕ್ ಕಲಾಕೃತಿಗಳು. ಮತ್ತೊಂದೆಡೆ ಚಾರ್ಕೋಲ್‌ನಲ್ಲಿ ಅರಳಿದ ಕಪ್ಪು, ಬಿಳುಪು ಕಲಾಕೃತಿಗಳು. ಇವೆರಡರ ನಡುವೆ ವ್ಯಕ್ತಿಯ ಒಳ ತುಡಿತ ಬಿಂಬಿಸುವ ಗಾಢ ವರ್ಣಗಳ ಕಲಾಕೃತಿಗಳು.

 ‘ಫೈವ್ ಈಸ್ ಎ ಪರ್ಫೆಕ್ಟ್ ನಂಬರ್’ ಪ್ರಸ್ತುತ ಪಡಿಸಿರುವ ಐವರು ಕಲಾವಿದರ ಸಮೂಹ ಪ್ರದರ್ಶನದಲ್ಲಿ ಇಂತಹ ವೈವಿಧ್ಯಮಯ ಕಲಾಕೃತಿಗಳಿವೆ.

ಮಂಗಳೂರಿನ ಬ್ಯಾಂಕ್ ಉದ್ಯೋಗಿ ಶರತ್ ಹೊಳ್ಳ, ಉದ್ಯಮಿ ಗಿಳಿಯಾಲ್ ಜಯರಾಮ ಭಟ್, ಪಾರ್ವತಿ ಭಟ್ ಗಿಳಿಯಾಲ್, ಗೋಪಿನಾಥ ಕೃಷ್ಣನ್ ಮತ್ತು ದೊಡ್ಡಬಳ್ಳಾಪುರದ ಯುವ ಕಲಾವಿದ ಎಂ. ಶಿವಕುಮಾರ್ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.

ಶರತ್, ಜಯರಾಮ, ಪಾರ್ವತಿ ಸಮಕಾಲೀನ ಕಲಾಕೃತಿಗಳ ಮೂಲಕ ತಮ್ಮ ಭಾವನೆಗಳಿಗೆ ದನಿ ನೀಡಿದ್ದಾರೆ. ಗೋಪಿನಾಥ ಕುಂಚದ ಮೂಲಕ ನಿಸರ್ಗದ ಹೋಲಿಕೆಯಿಲ್ಲದ ಚೆಲುವನ್ನು ಸೆರೆ ಹಿಡಿದಿದ್ದಾರೆ. ಎಂ. ಶಿವಕುಮಾರ್ ಚಾರ್ಕೋಲ್‌ನಲ್ಲಿ ಕಲಾಕೃತಿ ಮೂಡಿಸಿದ್ದಾರೆ.

ಶನಿವಾರದಿಂದ ಸೋಮವಾರದವರೆಗೆ ಈ ಪ್ರದರ್ಶನ ನಡೆಯಲಿದೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಕಲಾ ಪ್ರೇಮಿ ಡಿ. ಕೆ. ಚೌಟ ಪ್ರದರ್ಶನ ಉದ್ಘಾಟಿಸುವರು.

ಸ್ಥಳ: ಚಿತ್ರಕಲಾ ಪರಿಷತ್. ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 7.

ಪ್ರತಿಕ್ರಿಯಿಸಿ (+)