ಸಮೃದ್ಧಿಯ ಜೀವನಕ್ಕೆ ಧರ್ಮವೇ ತಳಹದಿ

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸಮೃದ್ಧಿಯ ಜೀವನಕ್ಕೆ ಧರ್ಮವೇ ತಳಹದಿ

Published:
Updated:

ಗೋಕಾಕ: ಸುಖ, ಶಾಂತಿ ಮತ್ತು ಸಮೃದ್ಧಿಯ ಜೀವನ ಬಯಸುವ ಜನತೆಗೆ ಧರ್ಮದ ನಡೆ-ನುಡಿಯೊಂದೇ ಸೂಕ್ತ ಪರಿಹಾರದ ಮಾರ್ಗವಾಗಿದೆ ಎಂದು ಧರ್ಮ ಚಿಂತಕ ಲಾಲ್‌ಹುಸೇನ ಕಂದಗಲ್ ನುಡಿದರು.ಇತ್ತೀಚೆಗೆ ಜುಮ್ಮೋ ಮಸೀದಿ ಆವರಣದಲ್ಲಿ ಜರುಗಿದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಲೋಕಪಾಲ ಮತ್ತು ಜನಲೋಕ ಪಾಲದಿಂದ ಭ್ರಷ್ಟಾಚಾರ ಮುಕ್ತ ಸಮಾಜ ಮತ್ತು ವ್ಯವಸ್ಥೆ ನಿರ್ಮಿಸು ವುದು ಅಸಾಧ್ಯದ ಮಾತು. ಮೊದಲು ಜನರ ಆಚಾರ-ವಿಚಾರ ಮತ್ತು ಮನೋಭಾವನೆ  ಪರಿವರ್ತನೆ ಆಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬೆಂಗಳೂರು-ವಿಜಾಪುರ ಮಾನವ ಹಕ್ಕುಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ ಮಾತನಾಡಿ, ಇಸ್ಲಾಂ ಧರ್ಮದ ಮೂಲ ತತ್ವವೇ ಸರ್ವಧರ್ಮಗಳನ್ನು ಪ್ರೀತಿಸುವುದಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನಾ ಮಠದ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮ, ಆಚಾರ- ವಿಚಾರದಿಂದ ನಡೆಯು ವವರಿಗೆ ಜನತೆ ಬೆಂಬಲ ನೀಡಿದಾಗ ಮಾತ್ರ ಒಳ್ಳೆಯ ಭವಿಷ್ಯವನ್ನು ಕಾಣಲು ಸಾಧ್ಯ ಎಂದರು.ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಧರ್ಮ ಸಮನ್ವಯತೆ ಎಲ್ಲರೂ ಮೂಡಿದಾಗ ಮಾತ್ರ ಪರಸ್ಪರ ಪ್ರೀತಿಯಿಂದ ಜೀವನ ಸಾಗಿಸುವುದು ಸಾಧ್ಯ ಎಂದು ಹೇಳಿದರು.ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನವಳ್ಳಿ, ಬಸವಣ್ಣೆಪ್ಪ ಕಂಬಾರ, ಗುರುಸಿದ್ದಪ್ಪ ಕುರಬೇಟ, ಮಾಯಪ್ಪ ತಹಶೀಲ್ದಾರ, ರಾಜುಗೌಡ ನಿರ್ವಾಣಿ, ಆನಂದ ಗೋಟಡಕಿ, ಮಹಾಂತೇಶ ಮಠಪತಿ, ನಗರ ಸೇವಕ ಶ್ರೀಶೈಲ ಪೂಜಾರಿ, ಬಸವರಾಜ ಹುಳ್ಳೇರ, ಕಾಡಪ್ಪ ಪಾಟೀಲ, ಶ್ರೀಕಾಂತ ಮರಲಿಂಗನ್ನವರ, ಅರ್ಜುನ ಪವಾರ, ಹಾಜರಿದ್ದರು. ಸೈಯದ ಬಾಷಿತ್ ಅಲಿ ನಿರೂಪಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry