ಮಂಗಳವಾರ, ಮೇ 24, 2022
31 °C

ಸಮ್ಮೇಳನಾಧ್ಯಕ್ಷರಿಗೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲಾ ಪ್ರಥಮ ತತ್ವಪದಕಾರರ ಸಮ್ಮೇಳನ ಪ್ರಯುಕ್ತ ಸಮ್ಮೇಳನಾಧ್ಯಕ್ಷ ರಘುನಾಥ ಹದಪದ ಅವರನ್ನು ನಗರದಲ್ಲಿ ಭಾನುವಾರ ಬೈಕ್ ರ‌್ಯಾಲಿಯ ಮೂಲಕ ಸಮ್ಮೇಳನ ಸ್ಥಳವಾದ ಐ.ಎಂ.ಎ. ಹಾಲ್‌ಗೆ ಕರೆತಲಾಯಿತು.ಚಿಟ್ಟಾವಾಡಿಯಿಂದ ಆರಂಭಗೊಂಡ ರ‌್ಯಾಲಿಯು ನಗರದ ಪ್ರಮುಖ ಮಾರ್ಗಗಳ ಮೂಲಕ ಹಾಯ್ದು ಐ.ಎಂ.ಎ. ಹಾಲ್‌ಗೆ ಆಗಮಿಸಿ ಸಮಾರೋಪಗೊಂಡಿತು. ತೆರೆದ ಜೀಪ್‌ನಿಂದಲೇ ಸಮ್ಮೇಳನಾಧ್ಯಕ್ಷರು ಸಾರ್ವಜನಿಕರತ್ತ ಕೈ ಬಿಸಿದರು.ದೊರಯದ ಮಹತ್ವ: ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಕ್ಕೆ ಸಿಕ್ಕಿರುವ ಮನ್ನಣೆ ತತ್ವಪದ ಸಾಹಿತ್ಯಕ್ಕೆ ದೊರೆತಿಲ್ಲ ಎಂದು ಎಂ.ಎಂ.ಎ. ಹಾಲ್‌ನಲ್ಲಿ ನಡೆದ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ತತ್ವಪದ ಸಾಹಿತ್ಯದ ಬಗ್ಗೆ ಮಾತನಾಡಿದ ಡಾ. ರಘುಶಂಖ ಭಾತಂಬ್ರಾ ತಿಳಿಸಿದರು.ತತ್ವಪದಗಳು ಬೇಸರ ಕಳೆಯಲು, ಮಾನಸಿಕ ಆಘಾತದಿಂದ ಹೊರ ಬರಲು ಹುಟ್ಟುಕೊಂಡಂಥವು. ಛಂದಸ್ಸು, ನಿಘಂಟುಗಳ ಜ್ಞಾನ ಇಲ್ಲದ ಅನೇಕರು ಪದಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ತತ್ವಪದ ರಚಿಸಿ ಗಮನ ಸೆಳೆದಿದ್ದಾರೆ ಎಂದು ಹೇಳಿದರು.ಹಾರೂರಗೇರಿ ಬಡಾವಣೆಯ ಮಹಿಳೆಯರು ತತ್ವಪದಗಳನ್ನು ಹಾಡಿ ಮನರಂಜಿಸಿದರು. ನಾಟ್ಯಶ್ರೀ ವಿದ್ಯಾಲಯದ ಮಕ್ಕಳು ತತ್ವಪದಗಳ ಮೇಲೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.