ಬುಧವಾರ, ಜನವರಿ 29, 2020
28 °C

ಸಮ್ಮೇಳನ ಸಿದ್ಧತೆ: ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧಿಸಿದಂತೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಸ್ಥಳವನ್ನು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಶುಕ್ರವಾರ ಪರಿಶೀಲನೆ ಮಾಡಿದರು.ಮುಖ್ಯ ವೇದಿಕೆ ನಿರ್ಮಾಣ, ಮುಖ್ಯ ವೇದಿಕೆಯ ಸನೀಹದಲ್ಲಿ ಮಾಧ್ಯಮ ಕೇಂದ್ರ ಸ್ಥಾಪನೆ, ವಾಹನ ನಿಲುಗಡೆ, ಮುಖ್ಯ ವೇದಿಕೆಯ ಬಲ ಭಾಗದಲ್ಲಿ 300 ಪುಸ್ತಕ ಮಳಿಗೆ ನಿರ್ಮಾಣ, ಮೂಲಸೌಲಭ್ಯಗಳು ಮತ್ತಿತರ ಕಾರ್ಯಗಳಿಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಪರಿಶೀಲನೆ ನಡೆಸಲಾಯಿತು.  ಸಮ್ಮೇಳನ ವೇದಿಕೆ ನಿರ್ಮಾಣಕ್ಕೆ ಟೆಂಡರ್ ಪಡೆದಿರುವ ಬೆಂಗಳೂರಿನ ರಾಜಾ ಎಂಟರ್ ಪ್ರೈಸರ್ಸ್‌ನ ಕೆ.ವಿ. ಶಂಕರ ಅವರು, ಮುಖ್ಯ ವೇದಿಕೆ ನಿರ್ಮಾಣ, ಮಾಧ್ಯಮ ಕೇಂದ್ರ, ಪುಸ್ತಕ ಮಳಿಗೆ ನಿರ್ಮಾಣ ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭೆ ಆಯುಕ್ತ ಎನ್.ಎಂ. ಶಶಿಕುಮಾರ್, ಲೋಕೋಪ ಯೋಗಿ ಇಲಾಖೆ ಕಾರ್ಯ ಪಾಲಕ ಎಂಜನಿಯರ್‌ ವೆಂಕಟಾದ್ರಿ, ಸಹಾಯಕ ಕಾರ್ಯಪಾಲಕ  ಎಂಜನಿಯರ್‌ ವಿನಯ್ ಕುಮಾರ್, ಮೊಹಿದ್ದೀನ್ ಇದ್ದರು.

ಪ್ರತಿಕ್ರಿಯಿಸಿ (+)