ಸರಕು ವಿನಿಮಯ ಮಾರುಕಟ್ಟೆಯಲ್ಲಿ ಅಕ್ರಮ ವಹಿವಾಟು:ಸಿಬಿಐ ತನಿಖೆಗೆ ಸ್ಥಾಯಿ ಸಮಿತಿ ಸಲಹೆ

7

ಸರಕು ವಿನಿಮಯ ಮಾರುಕಟ್ಟೆಯಲ್ಲಿ ಅಕ್ರಮ ವಹಿವಾಟು:ಸಿಬಿಐ ತನಿಖೆಗೆ ಸ್ಥಾಯಿ ಸಮಿತಿ ಸಲಹೆ

Published:
Updated:

ನವದೆಹಲಿ (ಪಿಟಿಐ): ಸರಕು ವಿನಿಮಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮ ವಹಿವಾಟನ್ನು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಫಾರ್ವಡ್ ಮಾರ್ಕೆಟ್ಸ್ ಕಮಿಷನ್ (ಎಫ್‌ಎಂಸಿ) ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂಥ ಪ್ರಕರಣಗಳನ್ನು `ಸಿಬಿಐ~ ತನಿಖೆಗೆ ಒಪ್ಪಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಸಲಹೆ ಮಾಡಿದೆ.ಸರಕು ವಿನಿಮಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳ ಮೇಲೆ `ಎಫ್‌ಎಂಸಿ~ ಸದಾ ನಿಗಾ ವಹಿಸಬೇಕು. ಇಂಥ ಪ್ರಕರಣಗಳ ಸಮಗ್ರ ತನಿಖೆಗಾಗಿ `ಸಿಬಿಐ~ಗೆ ಒಪ್ಪಿಸಬೇಕು ಎಂದು 2012-13ನೇ ಸಾಲಿನ ಬೇಡಿಕೆ ಅನುಮೋದನೆ ಮೇಲಿನ ಸ್ಥಾಯಿ ಸಮಿತಿ ವರದಿಯಲ್ಲಿ ಹೇಳಿದೆ.ಸರಕು ವಿನಿಮಯ ಮಾರುಕಟ್ಟೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಬೇಕಾದದ್ದು `ಎಫ್‌ಎಂಸಿ~ ಜವಾಬ್ದಾರಿ. ಅಕ್ರಮ ವಹಿವಾಟಿನಲ್ಲಿ ತೊಡಗಿರುವ ವ್ಯಕ್ತಿಗಳು ಎಷ್ಟೇ ಶಕ್ತರಿದ್ದರೂ ಅವರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಬೇಕು.

 

ಸದ್ಯ ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವವರಿಗೆ `ಫಾವರ್ಡ್ ಕಾಂಟ್ರಾಕ್ಸ್ ನಿಯಂತ್ರಣ ಮಸೂದೆ-1952~ರ ಯಾವುದೇ ಭೀತಿ ಇಲ್ಲ  ಎಂದು ವಿಲಾಸ್ ಮುಟ್ಟೆಂವರ್ ಅಧ್ಯಕ್ಷತೆಯಲ್ಲಿನ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಬರುವ `ಎಂಎಫ್‌ಸಿ~  ಯಡಿ ಸದ್ಯ 5 ರಾಷ್ಟ್ರೀಯ ಮತ್ತು 16 ಪ್ರಾದೇಶಿಕ ಸರಕು ವಿನಿಮಯ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry