ಸರಕು ವಿಮಾನ ಸೇವೆ ಆರಂಭ

7

ಸರಕು ವಿಮಾನ ಸೇವೆ ಆರಂಭ

Published:
Updated:

ಬೆಂಗಳೂರು: ಡಿಎಚ್‌ಎಲ್ ಕಂಪೆನಿಯು ಬೆಂಗಳೂರಿನಿಂದ ಜರ್ಮನಿಯ ಲಿಪ್‌ಜಿಗ್ ನಗರಕ್ಕೆ ಸರಕು ಸಾಗಣೆ ವಿಮಾನ ಸಂಪರ್ಕ ಸೇವೆ ಆರಂಭಿಸಿದೆ.  ವಾರದಲ್ಲಿ ಐದು ದಿನ ಡಿಎಚ್‌ಎಲ್ ಕಂಪೆನಿಯ ಸರಕು ಸಾಗಣೆ ವಿಮಾನ (ಬೋಯಿಂಗ್ 777) ಬೆಂಗಳೂರಿನಿಂದ ಲಿಪ್‌ಜಿಗ್‌ಗೆ ಪ್ರಯಾಣ ಬೆಳೆಸಲಿದೆ.ತೀವ್ರಗತಿಯಲ್ಲಿ ಬೆಳೆಯುತ್ತಿರುವ ಭಾರತದ ಮಾರುಕಟ್ಟೆ ಮತ್ತು ಇಲ್ಲಿನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಸೇವೆ ಆರಂಭಿಸಲಾಗಿದೆ ಎಂದು ಡಿಎಚ್‌ಎಲ್‌ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ಉಪಾಧ್ಯಕ್ಷ ಮಾಲ್ಕಂ ಮಾಂಟೆರಿಯೊ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈ ಸರಕು ಸಾಗಣೆ ವಿಮಾನ ಸೇವೆಯನ್ನು ಲುಫ್ತಾನ್ಸಾ ಕಾರ್ಗೊ ಮತ್ತು ಡಿಎಚ್‌ಎಲ್ ಕಂಪೆನಿಗಳು ಜಂಟಿಯಾಗಿ ನಿರ್ವಹಿಸಲಿವೆ. ಬೋಯಿಂಗ್ 777 ವಿಮಾನದಲ್ಲಿ ಒಂದು ಬಾರಿಗೆ 100 ಟನ್ ಭಾರದ ಸರಕುಗಳನ್ನು ಸಾಗಿಸಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry