ಶುಕ್ರವಾರ, ಮಾರ್ಚ್ 5, 2021
24 °C

ಸರಣಿ ಅಪಘಾತ: ಆರು ವಾಹನಗಳು ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಣಿ ಅಪಘಾತ: ಆರು ವಾಹನಗಳು ಜಖಂ

ಬೆಂಗಳೂರು: ಲಗ್ಗೆರೆ ಮುಖ್ಯರಸ್ತೆಯ ಚೌಡೇಶ್ವರಿನಗರದಲ್ಲಿ ಗುರುವಾರ ಬೆಳಿಗ್ಗೆ ಮರಳು ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಆರು ವಾಹನಗಳು ಜಖಂಗೊಂಡಿದ್ದು, ದೊಡ್ಡಯ್ಯ ಎಂಬುವರು ಗಾಯಗೊಂಡಿದ್ದಾರೆ.ಬೆಳಿಗ್ಗೆ 5.30ರ ಸುಮಾರಿಗೆ ಲಗ್ಗೆರೆ ಮುಖ್ಯರಸ್ತೆಯಲ್ಲಿ ಬಂದ ಮರಳು ಲಾರಿ, ಚಾಲಕನ ನಿಯಂತ್ರಣ ತಪ್ಪಿ ಟೆಂಪೊಗೆ ಡಿಕ್ಕಿ ಹೊಡೆಯಿತು.

ನಂತರ ಆ ಟೆಂಪೊ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಮುಂದೆ ನುಗ್ಗಿದ ಕಾರು, ಇತರೆ ಮೂರು ಟೆಂಪೊಗಳಿಗೆ ಗುದ್ದಿತು ಎಂದು ಪೊಲೀಸರು ಹೇಳಿದ್ದಾರೆ.ಮರಳು ಲಾರಿಯಲ್ಲಿದ್ದ ಕಾರ್ಮಿಕ ದೊಡ್ಡಯ್ಯ ಎಂಬುವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಅಪಘಾತ ಮಾಡಿದ ಲಾರಿ, ಕಾರು ಹಾಗೂ ನಾಲ್ಕು ಟೆಂಪೊಗಳು ಜಖಂಗೊಂಡಿವೆ.ಘಟನೆ ನಂತರ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೀಣ್ಯ ಸಂಚಾರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.