ಸರಣಿ ಅಪಘಾತ: 12 ಜನಕ್ಕೆ ಗಾಯ

7

ಸರಣಿ ಅಪಘಾತ: 12 ಜನಕ್ಕೆ ಗಾಯ

Published:
Updated:

ಮಾಗಡಿ: ತಾಲ್ಲೂಕಿನ ಜ್ಯೋತಪ್ಪನ ಪಾಳ್ಯ ಸಮೀಪದ ತಿರುವಿನಲ್ಲಿ ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ಸೊಂದು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿ 12 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.ಮಾಗಡಿಯಿಂದ ಬೆಂಗಳೂರು, ಮದ್ದೂರು ಮಾರ್ಗವಾಗಿ ಕೊಳ್ಳೆಗಾಲಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಎಡೆಯೂರಿಗೆ ಹೋಗುತ್ತಿದ್ದ ಮಹೀಂದ್ರ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದಿದೆ.    ಇದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮಾರುತಿ ವ್ಯಾನ್‌ಗೆ ಡಿಕ್ಕಿ ಹೊಡೆದು ನಂತರ ಟಿವಿಎಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಬಲ ಬದಿಗೆ ಹೋಗಿ ನಿಂತಿದೆ. ಸರ್ಕಾರಿ ಬಸ್ ಇನ್ನೂ 5 ಅಡಿ ಮುಂದೆ ಹೋಗಿದ್ದರೆ ಬಂಡೆಗೆ ಅಪ್ಪಳಿಸಿ ಭಾರಿ ಸಾವು ನೋವು ಉಂಟಾಗುತ್ತಿತ್ತು ಎಂದು ಗಾಯಾಳು ನೀಲಸಂದ್ರದ ಸ್ಕೂಟರ್ ಸವಾರ ಸದಾಶಿವಯ್ಯ ಮತ್ತು ದಾನಪ್ಪ ತಿಳಿಸಿದರು.ಅಪಘಾತಕ್ಕೆ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷವೇ ಕಾರಣ. ತಿರುವಿನಲ್ಲಿ ಎಡಬದಿಗೆ ಬಸ್ ಚಲಿಸುವ ಬದಲು ನೇರವಾಗಿ ಚಲಿಸಿದ ಪರಿಣಾಮ ಎದುರಿಗೆ ಬಂದ ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ.ಮಹೀಂದ್ರ ವ್ಯಾನ್‌ನ್ಲ್ಲಲಿದ ಶೇಷಾದ್ರಿ, ಪತ್ನಿ ನಿರ್ಮಲಾ, ತಾಯಿ ಲಲಿತಾ ,ಶಾಲಿನಿ ಇತರರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದ ಮುಂಭಾಗ ಜಖಂಗೊಂಡಿದೆ. ಗಾಯಾಳುಗಳು ಬೆಂಗಳೂರಿನ ಜೆ.ಪಿ.ನಗರದ 3ನೇ ಹಂತದ ನಿವಾಸಿಗಳು. ಇವರೆಲ್ಲಾ ಎಡೆಯೂರು ಸಿದ್ದಲಿಂಗೇಶ್ವರ ದರ್ಶನಕ್ಕೆ ಹೊರಟಿದ್ದರು ಎನ್ನಲಾಗಿದೆ.ಮಾರುತಿ ವ್ಯಾನಿನ್ಲ್ಲಲಿದ್ದ ಕುಮಾರ್, ಶಂಕರ್, ವೆಂಕಟೇಶ್‌ಗೆ ತೀವ್ರ ಪೆಟ್ಟು ಬಿದ್ದಿದೆ. ಇವರನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 5 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮಾಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ಸಾಗಿಸಲು ನೆರವಾದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry