ಸರಣಿ ಕ್ಲೀನ್ ಸ್ವೀಪ್ ಪಾಕಿಸ್ತಾನದ ಗುರಿ

7

ಸರಣಿ ಕ್ಲೀನ್ ಸ್ವೀಪ್ ಪಾಕಿಸ್ತಾನದ ಗುರಿ

Published:
Updated:

ದುಬೈ (ಎಪಿ): ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಶುಕ್ರವಾರ ಇಲ್ಲಿ ಆರಂಭವಾಗಲಿದೆ. ಸರಣಿಯಲ್ಲಿ 2-0 ರಲ್ಲಿ ಮುನ್ನಡೆ ಪಡೆದಿರುವ ಪಾಕ್ `ಕ್ಲೀನ್ ಸ್ವೀಪ್~ ಕನಸು ಕಾಣುತ್ತಿದೆ.

ಪಾಕಿಸ್ತಾನದ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾದ ಇಂಗ್ಲೆಂಡ್ ಮೊದಲ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲೂ ಸ್ಪಿನ್ನರ್‌ಗಳಾದ ಸಯೀದ್ ಅಜ್ಮಲ್ ಮತ್ತು ಅಬ್ದುಲ್ ರಹಮಾನ್ ಅವರ ನೆರವಿನಿಂದ ಇಂಗ್ಲೆಂಡ್ ತಂಡವನ್ನು ಮಣಿಸುವ ವಿಶ್ವಾಸದಲ್ಲಿ ಪಾಕ್ ತಂಡ ಇದೆ.

ಅಬುಧಾಬಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಗೆಲುವಿಗೆ 145 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ 72 ರನ್‌ಗಳಿಗೆ ಆಲೌಟಾಗಿತ್ತು. ಬ್ಯಾಟಿಂಗ್ ವೈಫಲ್ಯದಿಂದ ಹೊರಬರಲು ಇಂಗ್ಲೆಂಡ್ ಪ್ರಯತ್ನಿಸುತ್ತಿದೆ. ಪಾಕ್ ಇದುವರೆಗೂ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ `ಕ್ಲೀನ್ ಸ್ವೀಪ್~ ಸಾಧನೆ ಮಾಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry