ಶುಕ್ರವಾರ, ಮೇ 14, 2021
32 °C

ಸರಣಿ ಬಾಂಬ್ ಸ್ಫೋಟ: 14 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್ (ಪಿಟಿಐ): ಪ್ರವಾಸಿಗರು ಮತ್ತು ವ್ಯಾಪಾರಿಗಳನ್ನು ಗುರಿಯಾಗಿ ಟ್ಟುಕೊಂಡು ಶನಿವಾರ ನಡೆಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 14 ಜನರು ಮೃತಪಟ್ಟು ಇತರ 500 ಜನರು ಗಾಯಗೊಂಡ ಘಟನೆ ಥಾಯ್ಲೆಂಡ್ ದಕ್ಷಿಣದ ಯಲಾ ಪಟ್ಟಣದಲ್ಲಿ ಸಂಭವಿಸಿದೆ.ಯಲಾ ನಗರದ ಜನ ದಟ್ಟಣೆ ಪ್ರದೇಶದಲ್ಲಿ ಸಂಭವಿಸಿದ ಮೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಂಬತ್ತು ಜನರು ಮೃತಪಟ್ಟು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಹೋಟೆಲ್ ಮತ್ತು ಅಂಗಡಿ ಸಂಕೀರ್ಣವೊಂದರಲ್ಲಿ ನಡೆದ ಇನ್ನೊಂದು ಸ್ಫೋಟದಲ್ಲಿ ಐವರು ಮೃತಪಟ್ಟು 350 ಜನ ಗಾಯಗೊಂಡಿದ್ದಾರೆ. ಬಂಡುಕೋರರೇ ಈ ಬಾಂಬ್‌ಗಳನ್ನು ತಯಾರಿಸಿರುವುದು ದೃಢಪಟ್ಟಿದ್ದು, ಈ ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡವಿದೆಯೇ ಎಂಬುವುದು ಇನ್ನೂ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.