ಮಂಗಳವಾರ, ಅಕ್ಟೋಬರ್ 15, 2019
26 °C

ಸರಣಿ ಬೆಂಕಿ ಅನಾಹುತ

Published:
Updated:

ಲಾಸ್ ಏಂಜಲೀಸ್ (ಪಿಟಿಐ): ವಾರಾಂತ್ಯದ ರಜೆಯ ಜತೆಗೆ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡುತ್ತ್ದ್ದಿದ್ದ ಇಲ್ಲಿನ ಜನ, ದುಷ್ಕರ್ಮಿಗಳು ಎಸಗಿದ ಸರಣಿ ಬೆಂಕಿ ಅನಾಹುತಗಳಿಂದ ದಿಗ್ಭ್ರಮೆಗೊಂಡಿದ್ದಾರೆ.ಹಾಲಿವುಡ್ ಸೇರಿದಂತೆ ನಗರದ ಸುಮಾರು 40 ಕಡೆ ಗುರುವಾರದಿಂದ ಶನಿವಾರ ರಾತ್ರಿವರೆಗೆ ಈ ಕೃತ್ಯ ನಡೆದಿದೆ. ಬಹುತೇಕ ಪ್ರಕರಣಗಳಲ್ಲಿ ವಾಹನ ನಿಂತ ಸ್ಥಳದಲ್ಲಿಯೇ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಕೆಲವು ಕಡೆ ಬೆಂಕಿಯ ಜ್ವಾಲೆಗಳು ಸನಿಹದ ಕಟ್ಟಡ, ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳವರೆಗೆ ಹರಡಿದ್ದು ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ, ಫೆಡರಲ್ ತನಿಖಾಧಿಕಾರಿಗಳು ಹಾಗೂ ನೂರಾರು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 1992ರ ಗಲಭೆ ನಂತರದಲ್ಲಿ ನಡೆದ ಅತ್ಯಂತ ಘೋರ ಘಟನೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.   ಶುಕ್ರವಾರ ಬೆಳಗಿನ ಜಾವ 5 ತಾಸುಗಳಲ್ಲಿ ಬೆಂಕಿ ಹಚ್ಚಲಾಗಿದ್ದು  3. 50 ಲಕ್ಷ ಡಾಲರ್ ನಷ್ಟ ಉಂಟಾಗಿದೆ. ಆರೋಪಿಗಳ ಪತ್ತೆ ಹಚ್ಚಿದವರಿಗೆ 60 ಸಾವಿರ ಡಾಲರ್ ಬಹುಮಾನ ಘೋಷಿಸಲಾಗಿದೆ. ಬೆಂಕಿ ಹಚ್ಚಿದ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.

 

Post Comments (+)