ಸರಣಿ ಮೇಲೆ ಹಿಡಿತ ಉಳಿಸಿಕೊಳ್ಳಲು ಗೆಲುವು ಅಗತ್ಯ

7

ಸರಣಿ ಮೇಲೆ ಹಿಡಿತ ಉಳಿಸಿಕೊಳ್ಳಲು ಗೆಲುವು ಅಗತ್ಯ

Published:
Updated:

ನಿಕಟ ಪೈಪೋಟಿ ಇದ್ದ ಎರಡು ಪಂದ್ಯಗಳಲ್ಲಿ ಗೆದ್ದ ಭಾರತವು ಸುಸ್ಥಿತಿಯಲ್ಲಿದೆ. ಒತ್ತಡ ಇರುವುದು ನಮ್ಮ ಮೇಲೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಸರಣಿಯ ಮೇಲೆ ಹಿಡಿತ ಉಳಿಸಿಕೊಳ್ಳಲು ಶುಕ್ರವಾರದ ಪಂದ್ಯವು ನಮಗೆ ಮಹತ್ವದ್ದಾಗಿದೆ. 1-2ರಲ್ಲಿ ಹಿನ್ನಡೆ ಅನುಭವಿಸಿದ್ದು ಭಾರಿ ಆಘಾತಕಾರಿ. ಆದರೂ ಈಗಲೇ ನಿರಾಸೆಯಿಂದ ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಮುಂದಿರುವ ಪಂದ್ಯವನ್ನು ಗೆದ್ದ, ಪುಟಿದೆದ್ದು ನಿಲ್ಲಲು ಪ್ರಯತ್ನಿಸುತ್ತೇವೆ. ಮುಂದಿರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಈ ಸರಣಿಯಲ್ಲಿ ವಿಜಯ ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಅಗತ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.

ವಿಶ್ವಕಪ್‌ಗಾಗಿ ರಚಿಸಿರುವ ತಂಡದ ಬಗ್ಗೆ ನನಗೆ ಸಂತಸವಿದೆ. ಯಾವುದೇ ಪರಿಸ್ಥಿತಿಗೆ ಅಗತ್ಯವಾದಂಥ ಸಂಯೋಜನೆ ಮಾಡುವುದಕ್ಕೆ ನಾಯಕನಿಗೆ ಮುಕ್ತ ಅವಕಾಶ ಸಿಗುವಂತೆ ಮಾಡಲಾಗಿದೆ. ನಾಯಕನಾಗಿ ಈ ಹದಿನೈದು ಆಟಗಾರರನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ ಎನ್ನುವುದೇ ನನ್ನ ಮುಂದಿರುವ ಸವಾಲು. ವಿಶ್ವಕಪ್ ಟೂರ್ನಿಗಾಗಿ ಪ್ರಾಥಮಿಕ ಸಿದ್ಧತೆಗಳು ಆಗಿವೆ. ಯಶಸ್ಸು ನಮ್ಮದಾಗುತ್ತದೆಂದು ನಿರೀಕ್ಷಿಸುತ್ತಿರುವುದೂ ಸಹಜ. ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿನ ಪರಿಸರಕ್ಕೆ ಹೊಂದಿಕೊಂಡು ಆಡುವಷ್ಟು ಸಮರ್ಥ ಆಟಗಾರರು ತಂಡದಲ್ಲಿದ್ದಾರೆ. ಆದರೆ ಈ ಹಿಂದೆ ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದವರು ಬಹಳ ಕಡಿಮೆ. ಆದರೂ ಹೊಸಸವಾಲನ್ನು ನಿಭಾಯಿಸುವ ಛಲವಂತೂ ಪ್ರತಿಯೊಬ್ಬರಲ್ಲಿಯೂ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry