ಬುಧವಾರ, ಜೂನ್ 16, 2021
21 °C

ಸರಣಿ ರಜೆ: ಮತದಾನ ದಿನಾಂಕ ಬದಲಿಗೆ ಬಿಜೆಪಿ ಒತ್ತಾಯ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾ­ವಣೆಗೂ ಮುನ್ನ ಮತ್ತು ನಂತರ ಸರಣಿ ರಜೆಗಳು ಇರುವ ಕಾರಣ ಏ.17ರ ಮತದಾನದ ದಿನಾಂಕ­ವನ್ನು ಮುಂದೂಡಬೇಕು ಎಂದು  ರಾಜ್ಯ ಬಿಜೆಪಿ  ನಿಯೋಗ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.‘ಏ.12ರಂದು 2ನೇ ಶನಿವಾರ. ಏ.13 ಭಾನುವಾರ. ಏ.14 ಅಂಬೇಡ್ಕರ್‌ ಜಯಂತಿ. ಏ.15 ಮತ್ತು 16 ಎರಡು ದಿನ ರಜೆ ಹಾಕಿದರೆ ಒಟ್ಟು ಎಂಟು ದಿನ ರಜೆ ಸಿಗುತ್ತದೆ. 17ಕ್ಕೆ ಚುನಾವಣೆ. ಮರುದಿನ  ಏ.18 ಗುಡ್‌ಫ್ರೈಡೆ ಪ್ರಯುಕ್ತ ರಜೆ. ಏ.19 ಶನಿವಾರ, 20 ಭಾನುವಾರ. ಹೀಗೆ ದೀರ್ಘ ರಜೆಗಳು ಸಿಗುತ್ತವೆ ಎನ್ನುವ ಕಾರಣಕ್ಕೆ ನೌಕರ ವರ್ಗ ಮತದಾನ­ದಿಂದ ದೂರ ಉಳಿಯುವ ಸಾಧ್ಯತೆ ಇದೆ’ ಎಂದು ನಿಯೋಗದಲ್ಲಿದ್ದ ಬಿಜೆಪಿ ವಕ್ತಾರ ಎಸ್‌.ಸುರೇಶಕುಮಾರ್‌ ಹೇಳಿದರು.ಈ ಕಾರಣಕ್ಕಾಗಿ ಏ.17ರ ಬದಲಿಗೆ, ಏ.22 ಅಥವಾ 23ರಂದು ಚುನಾವಣೆ ನಡೆಸುವುದು ಸೂಕ್ತ ಎಂದು  ನಿಯೋಗ ಸಲಹೆ ಮಾಡಿದೆ.ಇದಕ್ಕೆ ಉತ್ತರಿಸಿದ ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ, ಈ ಸಂಬಂಧ ಆರ್ಚ್‌ ಬಿಷಪ್‌ ಕೂಡ ಮನವಿ ಸಲ್ಲಿಸಿದ್ದಾರೆ. ಎಲ್ಲವನ್ನೂ ಆಯೋಗದ ಗಮನಕ್ಕೆ ತರಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.