ಸರಳ ಭಾಷೆಯಲ್ಲಿ ಚರಿತ್ರೆ ತಿಳಿಸಿ: ಜೋಶಿ

7

ಸರಳ ಭಾಷೆಯಲ್ಲಿ ಚರಿತ್ರೆ ತಿಳಿಸಿ: ಜೋಶಿ

Published:
Updated:

ಬೆಂಗಳೂರು: ‘ಇತಿಹಾಸದ ವಿಷಯ ಗಳನ್ನು ಬರೆಯುವಾಗ ಆದಷ್ಟು ಕ್ಲಿಷ್ಟ ಭಾಷೆಯನ್ನು ತೊರೆದು ಸರಳತೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಸಂಶೋಧಕ, ಸಮ್ಮೇಳನಾಧ್ಯಕ್ಷ  ಡಾ. ಎಸ್.ಕೆ. ಜೋಶಿ ತಿಳಿಸಿದರು.ಕರ್ನಾಟಕ ಇತಿಹಾಸ ಅಕಾಡೆ ಮಿಯು ಮಿಥಿಕ್ ಸೊಸೈಟಿಯಲ್ಲಿ ಶನಿವಾರ ಆಯೋಜಿಸಿದ್ದ  27ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಇತಿಹಾಸ ಪುರಾತತ್ವಗಳ ಸಂಶೋ ಧನಾ ಕಾರ್ಯ ಕಷ್ಟವಾಗಿದ್ದರೂ, ನೀಡುವ  ಮಾಹಿತಿ ಸರಳವಾಗಿದ್ದರೆ ಬಹುಬೇಗ ಓದುಗರನ್ನು ತಲುಪುತ್ತದೆ’ ಎಂದು ಅಭಿಪ್ರಾಯಪಟ್ಟರು.‘ಇತಿಹಾಸಕ್ಕೆ ಸಂಬಂಧಪಟ್ಟ ಪ್ರೌಢ ಪ್ರಬಂಧಗಳು ಎರಡೇ ವರ್ಷಗಳಲ್ಲಿ ಆತುರಾತುರವಾಗಿ ಮಂಡನೆ ಯಾ ಗುತ್ತಿರುವುದು ಒಳ್ಳೆಯ ಬೆಳವಣಿ ಗೆಯಲ್ಲ. ಸಂಶೋಧನಾ ವಿದ್ಯಾರ್ಥಿ ಗಳು ಅಳವಾಗಿ ಅಧ್ಯಯ ನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುಣ ಮಟ್ಟದ ಸಂಶೋಧನಾ ಗ್ರಂಥಗಳು ಹೊರ ಬರಲು ಸಾಧ್ಯೆ’ ಎಂದು ಅಭಿಪ್ರಾಯಪಟ್ಟರು.‘ಗ್ರಾಮಗಳಲ್ಲಿ ಪ್ರಾಚ್ಯ ಅವಶೇಷ ಸಮೀಕ್ಷೆಯನ್ನು ಪುನರಾರಂಭಿಸಬೇಕು. ಆಗ ಮಾತ್ರ ನಾಡಿನ ಇತಿಹಾಸದ ಕಳಚಿದ ಕೊಂಡಿಗಳನ್ನು ಜೋಡಿಸಲು ಸಾಧ್ಯವಾಗುತ್ತದೆ’ ಎಂದರು.‘ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂರಕ್ಷಿಸದೇ ಇರುವ ನೂರಾರು ಗುಡಿಗಳು, ಕೋಟೆ ಕೊತ್ತಲ, ವಾಡೆಗಳು, ಪುಷ್ಕರಣಿಗಳು ಇವೆ. ಇವುಗಳನ್ನು ಸ್ಥಾನಿಕ ಸಂಸ್ಥೆಗಳಿಗೆ ಒಪ್ಪಿಸಿ ಜೀರ್ಣೋದ್ಧಾರ ಮಾಡುವ ಕಾರ್ಯಕ್ಕೆ ಚಾಲನೆ ನೀಡಬೇಕು’ ಎಂದು ಒತ್ತಾಯಿಸಿದರು.‘ಆಧುನಿಕ  ಕಟ್ಟಡಗಳು ಪ್ರಾಚೀನ ಚಾರಿತ್ರಿಕ ನೆಲೆಗಳನ್ನು, ಸ್ಮಾರಕಗಳನ್ನು ನುಂಗುತ್ತಿವೆ. 2012ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಂಗೀಕರಿಸಿದ್ದ ‘ಸ್ವತ್ತು ಸ್ವಾಧೀನ’ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು. ಶಾಸನತಜ್ಞ ಡಾ. ಬಾ.ರಾ. ಗೋಪಾಲ ಅವರ ಹೆಸರಿನಲ್ಲಿ ಶಾಸನ ತಜ್ಞರಾದ ಡಾ.ಆರ್. ಶೇಷಶಾಸ್ತ್ರಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ₨10 ಸಾವಿರ ನಗದು, ಫಲಕವನ್ನು ಒಳಗೊಂಡಿದೆ. ಬೈಸಾನಿ ರುಕ್ಮಣಮ್ಮ ರತ್ನಂಶೆಟ್ಟಿ  ದತ್ತನಿಧಿಯ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಯು ₨ಒಂದು  ಲಕ್ಷ  ನಗದು, ಫಲಕ ಒಳಗೊಂಡಿದ್ದು, ಇತಿಹಾಸತಜ್ಞ ಡಾ. ಸೂರ್ಯನಾಥ ಕಾಮತ್ ಅವರಿಗೆ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry