ಬುಧವಾರ, ಏಪ್ರಿಲ್ 21, 2021
30 °C

ಸರಳ, ಸಂಭ್ರಮದ ಅಂಬೇಡ್ಕರ್ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:  ನಗರದಲ್ಲಿ ಗುರುವಾರ ಜಿಲ್ಲಾಡಳಿತವೂ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ 120ನೇ ಜಯಂತಿ ಆಚರಿಸಿದವು.

ಜಿಲ್ಲಾಡಳಿತದ ವತಿಯಿಂದ ಮೊದಲಿಗೆ, ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಮಾಲಾರ್ಪಣೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ತ್ಯಾಗರಾಜನ್, ಜಿ.ಪಂ. ಸಿಇಒ ಎನ್.ಶಾಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ, ಉಪವಿಭಾಗಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ, ಜಿ.ಪಂ ಉಪಕಾರ್ಯದರ್ಶಿ ಲಕ್ಷ್ಮಿನಾರಾಯಣ, ತಹಶೀಲ್ದಾರ್ ಡಾ.ದಯಾನಂದ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ  ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.ಸೇವಾದಲ:  ಭಾರತ ಸೇವಾ ದಲದ ಜಿಲ್ಲಾ ಘಟಕದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಉದ್ಘಾಟಿಸಿದರು. ಪ್ರಮುಖರಾದ ಧನಮಟ್ಟನಹಳ್ಳಿ ವೆಂಕಟೇಶ್, ಜಿ.ಶ್ರೀನಿವಾಸ್, ಮಂಜುನಾಥ್, ಸುಧಾಕರ್, ವಿ.ಪಿ.ಸೋಮಶೇಖರ್, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ಸಮಿತಿ:  ಜಿಲ್ಲಾ ಕಾಂಗ್ರೆಸ್ ಸಮಿತಿಯು ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಹರೀಶ್, ನಗರಸಭೆ ಅಧ್ಯಕ್ಷೆ ನಾಜಿಯಾ, ಹೊಳಲಿ ಪ್ರಕಾಶ್, ಜಿಪಂ ಮಾಜಿ ಸದಸ್ಯ ವೆಂಕಟಮುನಿಯಪ್ಪ, ಇಕ್ಬಾಲ್, ಸಮಿತಿ ಅಧ್ಯಕ್ಷ ಎಂ.ಎಲ್. ಅನಿಲಕುಮಾರ್, ತಾಲ್ಲೂಕು ಘಟಕದ ಅಶ್ವಥನಾರಾಯಣ, ಊರುಬಾಗಲು ಶ್ರೀನಿವಾಸ್, ಜಯದೇವ್ ಪಾಲ್ಗೊಂಡಿದ್ದರು.ಬಹಿರಂಗ ಸಭೆ: ನಗರದ ಬಂಗಾರಪೇಟೆ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ ಬಹಿರಂಗ ಸಭೆ ಉದ್ಘಾಟಿಸಿ ಜಿಲ್ಲಾ ಶಾಂತಿ ಸಮಿತಿ ಅಧ್ಯಕ್ಷ, ವಕೀಲ ಕೃಷ್ಣ ಮಾತನಾಡಿದರು. ಸಮಿತಿಯ ರಾಜ್ಯ ಘಟಕದ ಸಂಚಾಲಕ ಟಿ..ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಡಾ.ನಾಗರಾಜ ಮುಖ್ಯಭಾಷಣ ಮಾಡಿದರು. ಪ್ರಭಾವತಿ ಮತ್ತು ಕೆ.ವೆಂಕಟಾಚಲಪತಿ ಹಾಜರಿದ್ದರು.  ತೊರಡಿ ಶಿವಣ್ಣ, ಕಾಶಿ, ವೆಂಕಟೇಶ್, ವೆಂಕಟಸ್ವಾಮಿ, ನಾರಾಯಣಪ್ಪ, ಕೃಷ್ಣ, ರಾಮಚಂದ್ರ, ವೆಂಕಟೇಶ್, ನಾರಾಯಣಸ್ವಾಮಿ, ಶ್ರೀನಿವಾಸ್, ಹೆಬ್ಬಣಿ ಎಂ.ವೆಂಕಟಪ್ಪ, ಪಿ.ನಾರಾಯಣ್, ಎಂ.ಶಿವಣ್ಣ, ಶ್ರೀನಿವಾಸ್, ನಾರಾಯಣಸ್ವಾಮಿ, ಆನಂದ ಕ್ರಾಂತಿಗೀತೆಗಳನ್ನು ಹಾಡಿದರು. ಟಿ.ಜಯರಾಂ ಭಾಗವಹಿಸಿದ್ದರು.ಅರಣ್ಯ ಇಲಾಖೆ: ಗಾಜಲದಿನ್ನೆಯಲ್ಲಿಯ ತಮ್ಮ ಕಚೇರಿಯಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಅನಿಲ್‌ಕುಮಾರ್ ರತನ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪುರುಷೋತ್ತಮ ರಾವ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.ವರ್ತೂರು ನಮನ: ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಆರ್. ವರ್ತೂರ್ ಪ್ರಕಾಶ್ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ನಗರಸಭಾ ಸದಸ್ಯ ವಿ.ಕೆ. ರಾಜೇಶ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್. ರಾಜಣ್ಣ, ಸಿ.ರಘುರಾಂ, ಆಟೋ ನಾರಾಯಣಸ್ವಾಮಿ, ಕೆ.ಎಸ್. ಗಣೇಶ್, ಅಪ್ಪಿ ಹಾಜರಿದ್ದರು.ಕದಸಂಸ:  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ವತಿಯಿಂದ ನಗರ ನಚಿಕೇತ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪ್ರಮುಖರಾದ ವಿ.ನಾರಾಯಣಸ್ವಾಮಿ, ನಾಗನಾಳ ಮುನಿಯಪ್ಪ, ಡಿ.ಚಿಕ್ಕಣ್ಣ, ಟಿ.ಎಂ.ನಾರಾಯಣಪ್ಪ, ನಾಗರಾಜ, ಮುನಿರಾಜು, ಸುರೇಶ್, ಆಂಜಿನಪ್ಪ, ವೆಂಕಟೇಶ್, ಚಂದ್ರಶೇಖರ್, ರಿಯಾಜ್ ಪಾಷಾ, ಬಾಬು, ಸುಲ್ತಾನ್, ನಜೀರ್ ಪಾಷಾ ಭಾಗವಹಿಸಿದ್ದರು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.ವಡಗೂರು ಗ್ರಾಪಂ : ವಡಗೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಎ.ಎಂ.ಗೀತಾ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಕುರಿತು ಉಪಾಧ್ಯಕ್ಷ ಎಂ.ಶ್ರೀನಿವಾಸ್ ಮತ್ತು ಶಿಕ್ಷಕ ವೆಂಕಟಗಿರಿಯಪ್ಪ ಉಪನ್ಯಾಸ ನೀಡಿದರು. ಸದಸ್ಯೆ ಎಸ್.ಎನ್.ಮಂಜುಳಾ ಉಪಸ್ಥಿತರಿದ್ದರು.ಬಿಇಓ ಕಚೇರಿ: ಬಂಗಾರಪೇಟೆಯ ತಮ್ಮ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಭಾರಿ ಬಿಆರ್‌ಸಿ ಪ್ರಭಾಕರ್ ಬಿ.ಆರ್.ಪಿ ಆರ್.ಶ್ರೀನಿವಾಸನ್, ರಾಜಪ್ಪ, ಇಸಿಒ ಗಳಾದ ಶ್ರೀರಾಮಯ್ಯ, ಹನುಮಂತಯ್ಯ, ನಯಾಜ್‌ಹಮ್ಮದ್, ಸೋಮಶೇಖರ್, ಸುರೇಶ್, ವೆಳಿಗನ್,  ಸಿಆರ್‌ಪಿ, ಸಿಬ್ಬಂದ್ದಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.