ಸರಸ್ವತಿ ಶಾಲೆಯಲ್ಲಿ `ಸಂಕಲ್ಪ ದಿನ'

7

ಸರಸ್ವತಿ ಶಾಲೆಯಲ್ಲಿ `ಸಂಕಲ್ಪ ದಿನ'

Published:
Updated:

ಬೀದರ್: ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮವರ್ಷ ಅಭಿಯಾನ ಪ್ರಯುಕ್ತ ನಗರದ ಸರಸ್ವತಿ ಶಾಲೆಯಲ್ಲಿ ಮಂಗಳವಾರ `ಸಂಕಲ್ಪ ದಿನ' ಕಾರ್ಯಕ್ರಮ ಆಯೋಜಿಸಲಾಗಿತ್ತು.ದೇಶದ ಶ್ರೇಷ್ಠವಾದ ಸಂಸ್ಕೃತಿಯನ್ನು ವಿಶ್ವಕ್ಕೆ ಮೊದಲು ಪರಿಚಯ ಮಾಡಿಕೊಟ್ಟ ಶ್ರೆಯಸ್ಸು ಸ್ವಾಮಿ ವಿವೇಕಾನಂದ ಅವರಿಗೆ ಸಲ್ಲುತ್ತಿದೆ ಎಂದು ಅಭಿಯಾನದ ಪ್ರಾಂತ ಸೇವಾ ಪ್ರಮುಖರಾದ ಕೃಷ್ಣಮೂರ್ತಿ ತಿಳಿಸಿದರು.ಸ್ವಾಮಿ ವಿವೇಕಾನಂದ ದೇಶದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಸಂಕಲ್ಪದೊಂದಿಗೆ ದೇಶಗಳನ್ನು ಸುತ್ತಿದರು. ಇಂದಿನ ಯುವಕರು ದೇಶ ಸಂಸ್ಕ್ರತಿಯನ್ನು ಅರಿತುಕೊಂಡು, ಪ್ರಚಾರ ಮಾಡಲು ಮುಂದಾಗಬೇಕು ಎಂದು ಸಲಹೆ ಮಾಡಿದರು.ಅಭಿಯಾನದ ಜಿಲ್ಲಾ ಸಂಯೋಜಕ ರೇವಣಿಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಕಲ್ಪ ದಿನ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.ಪ್ರೊ. ದೇವೇಂದ್ರ ಕಮಲ್, ಪ್ರಮುಖರಾದ ಈಶ್ವರಸಿಂಗ್ ಠಾಕೂರು, ಮಹೇಶ್ವರ್ ಸ್ವಾಮಿ, ಚಂದ್ರಶೇಖರ್ ಗಾದಾ, ಶಾಂತಕುಮಾರ್ ಬಿರಾದಾರ್, ಬಸವಕುಮಾರ್ ಪಾಟೀಲ್ ಇದ್ದರು. ಜಗನ್ನಾಥ ಭಂಗೂರೆ ನಿರೂಪಿಸಿದರು. ನಾರಾಯಣರಾವ್ ಮುಖೇಡಕರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry