ಶನಿವಾರ, ಮೇ 15, 2021
27 °C

ಸರ್.ಎಂ.ವಿ.ಬದುಕು ಆದರ್ಶವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ದೇಶದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಬದುಕು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಲಿ ಎಂದು ಕನ್ನಡಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ವಿಶ್ವನಾಥಗೌಡ ಕರೆನೀಡಿದರು.

 

ಪಟ್ಟಣದ ಕ್ರಮುಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸರ್ ಎಂ.ವಿ.ಯವರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಸಿದಾಗ ಉಣ್ಣುವುದು ಪ್ರಕೃತಿ,ಹೊಟ್ಟೆ ತುಂಬಿ ಉಣ್ಣುವುದು ವಿಕೃತಿ, ಹಸಿದವರಿಗೆ ಹಂಚಿ ತಿನ್ನುವುದು ಸಂಸ್ಕೃತಿ ಎಂಬ ಧ್ಯೇಯ ದೊಡನೆ ದೇಶದ ಕೃಷಿ,ಕೈಗಾರಿಕೆ,ವಿದ್ಯುತ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿ ಶಿಸ್ತು ಮತ್ತು ಸಮಯ ಪಾಲನೆಗೆ ಮಹತ್ವ ನೀಡಿದ ಅವರ ಸಾಧನೆ ಅನುಕರಣೀಯ ಎಂದು ನುಡಿದರು.ಸರ್ ಎಂ.ವಿ.ಜೀವನ ಮತ್ತು ಸಾಧನೆ ಕುರಿತು ಶಿಕ್ಷಕರಾದ ಮುತ್ತಮ್ಮ, ರತ್ನಮ್ಮ ಮತ್ತು ಸುರೇಂದ್ರಬಾಬು ಮಾತನಾಡಿ ವಿಶ್ವೇಶ್ವರಯ್ಯನವರ ಒಂದೆರಡು ಗುಣ ಗಳನ್ನಾದರೂ ಇಂದಿನ ವಿದ್ಯಾರ್ಥಿಗಳು ಅಳ ವಡಿಸಿಕೊಂಡು ಉದಾತ್ತಧ್ಯೇಯದೊಂದಿಗೆ ಬಾಳುವಂತೆ ಕರೆ ನೀಡಿದರು.ಮುಖ್ಯಶಿಕ್ಷಕಿ ಜೋಸೆಫಿನ್,ಸಹಶಿಕ್ಷಕರಾದ ಗಂಗಾಧರ್,ಶೋಭಾ, ಮಹದೇವಮ್ಮ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಸರ್.ಎಂ.ವಿ.ಜನ್ಮ ದಿನಾಚರಣೆ

ಕಡೂರು: ಭಾರತರತ್ನ ಸರ್.ಎಂ. ವಿಶ್ವೇಶ್ವ ರಯ್ಯ ಅವರ 151ನೇ ಜನ್ಮ ದಿನವನ್ನು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಗುರುವಾರ ಆಚರಿಸಲಾಯಿತು.ಬ್ಯಾಂಕ್‌ನ ವ್ಯವಸ್ಥಾಪಕ ಡಿ.ಎಸ್.ಸುಬ್ರಹ್ಮಣ್ಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದರು.ಬ್ಯಾಂಕ್‌ನ ಸಿಬ್ಬಂದಿ ಪಾಲ್ಗೊಂಡು ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.