ಸರ್ಕಾರಕ್ಕೆ ಭೂಮಿ ಹಿಂದಿರುಗಿಸಿ; ಟಾಟಾಗೆ `ಸುಪ್ರೀಂ' ಸಲಹೆ

ಭಾನುವಾರ, ಜೂಲೈ 21, 2019
21 °C

ಸರ್ಕಾರಕ್ಕೆ ಭೂಮಿ ಹಿಂದಿರುಗಿಸಿ; ಟಾಟಾಗೆ `ಸುಪ್ರೀಂ' ಸಲಹೆ

Published:
Updated:

ನವದೆಹಲಿ (ಐಎಎನ್‌ಎಸ್): ನ್ಯಾನೊ ಸಣ್ಣ ಕಾರು ತಯಾರಿಕೆ ಕಾರ್ಖಾನೆಗೆಂದು ವಶಪಡಿಸಿಕೊಂಡಿರುವ ಕೃಷಿ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕಾಗಿರುವುದರಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆ ಜಮೀನನ್ನು ಮರಳಿ ಒಪ್ಪಿಸುವಂತೆ ಟಾಟಾ ಮೋಟಾರ್ಸ್‌ಗೆ ಬುಧವಾರ ಸುಪ್ರೀಂ ಕೋರ್ಟ್ ಪುನಃ ಸಲಹೆ ನೀಡಿತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್.ಎಲ್.ದತ್ತು ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಭೂಮಿಯನ್ನು ಗುತ್ತಿಗೆ ಪಡೆದಿರುವ ಟಾಟಾ ಮೋಟಾರ್ಸ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ  `ಆ ಜಮೀನಿನಲ್ಲಿ ನೀವು ಯಾವುದೇ ರೀತಿಯ ವ್ಯವಹಾರ ನಡೆಸುತ್ತಿಲ್ಲ.  ಜಮೀನಿನಿಂದ ಯಾವುದೇ ಲಾಭ ನಿರೀಕ್ಷಿಸುವಂತಿಲ್ಲ.  ರೈತರಿಗೆ ಭೂಮಿ ಮರಳಿಸುವ ಸರ್ಕಾರದ ಕೆಲಸಕ್ಕೆ ಏಕೆ ಅಡ್ಡಿ ಬರುತ್ತಿದ್ದೀರಿ?' ಎಂದು ಪೀಠವು ಪ್ರಶ್ನಿಸಿತು.ಇದೇ ವೇಳೆ ಪೀಠವು ಟಾಟಾ ಪರ ವಕೀಲರಾದ ಗೊಪಾಲ್ ಜೈನ್ ಅವರಿಗೆ  ಆಗಸ್ಟ್ 6 ರಂದು ನ್ಯಾಯಾಲಯ ನೀಡಿದ್ದ ಸಲಹೆಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿತು.

ವಿಚಾರಣೆ ವೇಳೆ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿನಿಧಿಯಾದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾದ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಅವರು `ಒಂದು ವೇಳೆ ಟಾಟಾ ಮೋಟಾರ್ಸ್ ರೈತರಿಗೆ ಜಮೀನು ಮರಳಿಸಿದರೆ ಪರಿಹಾರ ಹಣವನ್ನು ಹಿಂದಿರುಗಿಸಲು ಸರ್ಕಾರ ಸಿದ್ಧವಿದೆ' ಎಂದು ನ್ಯಾಯಾಲಯಕ್ಕೆ ತಿಳಿಸಿದರು.ಸಿಂಗೂರ್ ಭೂಮಿಗೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ  ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry