ಸರ್ಕಾರಕ್ಕೆ ಲಾಭವೊಂದೇ ಗುರಿಯಲ್ಲ

7

ಸರ್ಕಾರಕ್ಕೆ ಲಾಭವೊಂದೇ ಗುರಿಯಲ್ಲ

Published:
Updated:

ಗೌರಿ, ಗಣೇಶ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ಇದರಿಂದ ಹೆಚ್ಚಿನ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ.ಸರ್ಕಾರಕ್ಕೂ ಅಧಿಕ ಲಾಭ ಸಿಗುತ್ತದೆ. ಆದರೆ ಈ ಬಸ್ಸುಗಳಲ್ಲಿ ಪ್ರಯಾಣ ಮಾಡುವವರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕಾದರೆ, ಶೇ 20 ರಷ್ಟು ಹೆಚ್ಚು ಪ್ರಯಾಣ ದರ ಪಾವತಿಸಬೇಕಾಗಿದೆ. ಈ ವಿಚಾರದಲ್ಲಿ ಸರ್ಕಾರ ಲಾಭವನ್ನು ಲೆಕ್ಕಹಾಕುತ್ತಿದೆ. ಪ್ರಯಾಣಿಕರ ಹಿತ ಮರೆತಿದೆ. 1994ರಿಂದಲೂ ಈ ನಿಯಮ ಜಾರಿಯಲ್ಲಿದೆ  ಎಂದು ವರ್ಷಗಳ ಲೆಕ್ಕ ನೀಡುವ ಬದಲು, ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry