ಸರ್ಕಾರಗಳ ಮೇಲೆ ನಂಬಿಕೆ ಇಲ್ಲ: ಹೆಗ್ಡೆ

7

ಸರ್ಕಾರಗಳ ಮೇಲೆ ನಂಬಿಕೆ ಇಲ್ಲ: ಹೆಗ್ಡೆ

Published:
Updated:

ಹುಬ್ಬಳ್ಳಿ: `ಜನಸಾಮಾನ್ಯರ ಸಮಸ್ಯೆ ಆಲಿಸುವ ಸ್ಥಿತಿಯಲ್ಲಿ ಸರ್ಕಾರಗಳಿಲ್ಲ. ಹೀಗಾಗಿ ಸರ್ಕಾರಗಳ ಮೇಲೆ ನನಗೆ ನಂಬಿಕೆ ಇಲ್ಲ. ಸಾಮಾನ್ಯರು, ನೊಂದವರ ಸಮಸ್ಯೆಗಳನ್ನು ನಿವಾರಿಸಲು ಸೇವಾಸಂಸ್ಥೆಗಳು ತಲೆ ಎತ್ತಬೇಕು' ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.ಅವ್ವ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ `ಅವ್ವ' ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ದುರಾಡಳಿತದಿಂದಾಗಿ ವ್ಯವಸ್ಥೆ ಕೆಟ್ಟು ಹೋಗಿದೆ. ಸೇವಾಸಂಸ್ಥೆಗಳು ಸ್ಥಾಪನೆಗೊಂಡು ಜನರ ಬೇಡಿಕೆಗಳನ್ನು ಈಡೇರಿಸಬೇಕು. ಬಡವರ ಕೆಲಸ ಮಾಡಿಕೊಡಲು ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆ. ಕಾನೂನಾತ್ಮಕ ಸೌಲಭ್ಯಗಳನ್ನು ಪಡೆಯಲು ಲಂಚ ಕೊಡಬೇಕಾದ ಸ್ಥಿತಿ ಇದೆ' ಎಂದು ವಿಷಾದಿಸಿದರು.`2006-07ರಲ್ಲಿ ಬಿಸಿಯೂಟ ಸೇರಿದಂತೆ ಎಂಟು ಯೋಜನೆಗಳಿಗೆ ಕೇಂದ್ರ ಸರ್ಕಾರ ಕೋಟಿಗಟ್ಟಲೆ ರೂಪಾಯಿ ಬಿಡುಗಡೆ ಮಾಡಿತ್ತು. ಸಿಎಜಿ ನೀಡಿದ ವರದಿ ಪ್ರಕಾರ ಆ ವರ್ಷ ವೆಚ್ಚವಾದ 51,000 ಕೋಟಿ ರೂಪಾಯಿಗೆ ದಾಖಲೆಗಳೇ ಇಲ್ಲ. ಅಷ್ಟೊಂದು ಭ್ರಷ್ಟಾಚಾರ ನಮ್ಮ ದೇಶದಲ್ಲಿ ತುಂಬಿ ತುಳುಕುತ್ತಿದೆ' ಎಂದರು.`ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾದ ಮೇಲೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮನಸ್ಸಿತ್ತು. ಆದರೆ ಸರ್ಕಾರ ಲೋಕಾಯುಕ್ತನಾಗಿ ನೇಮಕ ಮಾಡಿತು. ಆ  ಅವಧಿಯಲ್ಲಿ ಹಲವು ಅವ್ಯವಹಾರ, ದುರಾಡಳಿತಗಳನ್ನು ಕಂಡಿದ್ದೇನೆ. ನಾನೀಗ ಹೋರಾಟಗಾರನಾಗಿದ್ದು, ಬೀದಿಗಿಳಿದಿದ್ದೇನೆ. ನಾನು ನೀಡಿದ ವರದಿ ಎಲ್ಲರಿಗೂ ನನ್ನನ್ನು ಪರಿಚಯಿಸಿತು. ನಾನು ಆ ವರದಿಯಲ್ಲಿ ಸತ್ಯವನ್ನಷ್ಟೇ ಹೇಳಿದ್ದೇನೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry