ಸರ್ಕಾರದ ಇಬ್ಬಗೆಯ ನೀತಿ

7

ಸರ್ಕಾರದ ಇಬ್ಬಗೆಯ ನೀತಿ

Published:
Updated:

ಪಶುಸಂಗೋಪನಾ ಇಲಾಖೆಯಲ್ಲಿ 1158 ಪಶು ವೈದ್ಯಕೀಯ ಸಹಾಯಕರ ಹುದ್ದೆಗಳು ಖಾಲಿ ಇವೆ ಎಂದು  ಮಾರ್ಚ್ 29ರ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವುಗಳ ಪೈಕಿ 642 ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ. ಈ ಹುದ್ದೆಗಳಿಗೆ ಕಳೆದ 13 ವರ್ಷಗಳಿಂದ ನೇಮಕಾತಿ ಆಗಿಲ್ಲ.ಜೆಒಸಿ ಮೂಲಕ ಪಶುವೈದ್ಯಕೀಯ ಚಿಕಿತ್ಸೆ ತರಬೇತಿ ಪಡೆದ 20,000ಕ್ಕೂ ಹೆಚ್ಚು ಅಭ್ಯರ್ಥಿಗಳು ರಾಜ್ಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ  ಖಾಲಿ ಇರುವ ಎಲ್ಲಾ 1158 ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಆರೋಗ್ಯ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 5,000 ಕಿರಿಯ ಆರೋಗ್ಯ ಸಹಾಯಕ, ಸಹಾಯಕಿಯರ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳು ಇಲ್ಲದಿದ್ದರೂ ಹಣಕಾಸು ಇಲಾಖೆ ಒಪ್ಪಿಗೆ ನೀಡುತ್ತಲೇ ಇದೆ. ಸರ್ಕಾರ ಆರೋಗ್ಯ ಇಲಾಖೆಗೆ ಒಂದು ನೀತಿ, ಪಶುಸಂಗೋಪನಾ ಇಲಾಖೆಗೆ ಇನ್ನೊಂದು ಬಗೆಯ ನೀತಿ ಅನುಸರಿಸುತ್ತಿದೆ.ಹೈನುಗಾರಿಕೆ ತರಬೇತಿ ಪಡೆದ  ನಿರುದ್ಯೋಗಿಗಳು, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry