ಮಂಗಳವಾರ, ಏಪ್ರಿಲ್ 20, 2021
24 °C

ಸರ್ಕಾರದ ಧೋರಣೆ: ವಿಶ್ವಕರ್ಮರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: ವಿಶ್ವಕರ್ಮ ಸಮಾಜದ ಬೇಡಿಕೆ ಈಡೇರಿಸಲು ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ಸಮುದಾಯದ ಸಹಕಾರದೊಂದಿಗೆ ಈ ತಿಂಗಳ 8ರಿಂದ ಮೈಸೂರಿನ ಚಾಮುಂಡಿ ಬೆಟ್ಟದಿಂದ ಬೆಂಗಳೂರಿನ ರಾಜಭವನದವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.ಕರ್ನಾಟಕ ವಿಶ್ವಕರ್ಮ ವೇದಿಕೆಯು ಹೆಸರಘಟ್ಟ ರಸ್ತೆಯ ಗಾಯಿತ್ರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಪಾದಯಾತ್ರೆಯಲ್ಲಿ ರಾಜ್ಯದ ಸಹಸ್ರಾರು ಮಂದಿ ಭಾಗವಹಿಸಲಿದ್ದಾರೆ ಎಂದರು.`ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು 35 ಲಕ್ಷದಷ್ಟಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಸಮಾಜಕ್ಕೆ ಆದ್ಯತೆ ಸಿಗದಿರುವುದು ವಿಪರ್ಯಾಸದ ಸಂಗತಿ. ಇದಕ್ಕೆ ಸಮಾಜದ ಸಂಘಟನೆಯ ಕೊರತೆಯೇ ಕಾರಣ~ ಎಂದು ವಿಷಾದಿಸಿದರು.`ನಮ್ಮ ಸಮಾಜ ಕೂಡ ಎಲ್ಲರಂತೆ ಸಂಘಟಿತವಾಗಿ ಹೋರಾಟದ ಅಸ್ತ್ರವನ್ನು ಬಳಸಿಕೊಂಡು ಹಕ್ಕು ಪ್ರತಿಪಾದಿಸಿದರೆ ಎಲ್ಲ ರಂಗಗಳಲ್ಲಿಯೂ ಅವಕಾಶಗಳು ಹುಡುಕಿಕೊಂಡು ಬರಲಿವೆ. ಇದನ್ನು ಅರಿತು ಸಮುದಾಯ ಮೊದಲು ಸಂಘಟಿತವಾಗಲು ಪ್ರಯತ್ನಿಸಬೇಕು~ ಎಂದು ಮನವಿ ಮಾಡಿದರು.ಶಾಸಕ ಎಸ್.ಮುನಿರಾಜು, ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಸ್.ಲೋಕನಾಥಾಚಾರ್, ಪದಾಧಿಕಾರಿಗಳಾದ ನಿರಂಜನಾಚಾರ್, ರಮೇಶಾಚಾರ್, ಡಾ.ಕೆ.ಜಿ. ಮಂಜುನಾಥ್, ಲೋಕೇಶಾಚಾರ್, ರಾ. ಮೂರ್ತಿ, ಎಸ್.ಮಂಜುನಾಥ್, ಎನ್.ವಿ.ನಾಗರಾಜಾಚಾರ್, ಸಂಜೀವಾಚಾರ್, ರುದ್ರೇಶ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.