ಸರ್ಕಾರದ ಶುಲ್ಕ ನೀತಿಗೆ ಎಬಿವಿಪಿ ವಿರೋಧ

7

ಸರ್ಕಾರದ ಶುಲ್ಕ ನೀತಿಗೆ ಎಬಿವಿಪಿ ವಿರೋಧ

Published:
Updated:

ಹಾವೇರಿ: ಹಿಂದುಳಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊರಡಿಸಿರುವ ಶುಲ್ಕ ನೀತಿಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾ ಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಆದರ್ಶ ಐಟಿಐ ಕಾಲೇಜಿ ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಎಬಿವಿಪಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ   ಸಂಚರಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೊಸಮನಿ ಸಿದ್ದಪ್ಪ ವೃತ್ತಕ್ಕೆ      ಆಗಮಿಸಿ ಕೆಲ ಹೊತ್ತು ರಸ್ತೆತಡೆ ನಡೆಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಗಿರೀಶ ಓಲೇಕಾರ ಮಾತ ನಾಡಿ, ರಾಜ್ಯ ಸರ್ಕಾರ `2~ಎ, `3~ಎ ಮತ್ತು 3ಬಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ, ಭೋದನಾ ಶುಲ್ಕ, ಪ್ರಯೋಗಾ ಲಯ ಶುಲ್ಕವನ್ನು ಸಂಪೂರ್ಣವಾಗಿ ಪಾವತಿ ಮಾಡಬೇಕೆಂದು ಹೊರಡಿಸಿ ರುವ ಆದೇಶ ಅಸಂವಿಧಾನಿಕ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.ಈ ಹಿಂದೆ ಶುಲ್ಕವನ್ನು ಸರ್ಕಾರವೇ ಭರಿಸುತ್ತಿತ್ತು. ರಾಜ್ಯವು ಬರದಿಂದ ತತ್ತರಿಸಿದೆ ಹಾಗೂ ದಿನನಿತ್ಯ ಏರುತ್ತಿರುವ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಷ್ಟಪಡುತ್ತಿರುವ ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶುಲ್ಕವನ್ನು ಭರಿಸಲಾರದ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.ಸರ್ಕಾರದ ಈ ಆದೇಶದಿಂದ ಸುಮಾರು 6 ಲಕ್ಷ ಗ್ರಾಮೀಣ    ಹಾಗೂ ನಗರ ಪ್ರದೇಶದ ಪ್ರತಿಭಾನ್ವಿತ ಹಿಂದು ಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದಕಾರಣ ಶುಲ್ಕವನ್ನು ಮರುಪಾವತಿಸುವುದು ಹಾಗೂ ಅನುದಾನ ಲಭ್ಯವಿಲ್ಲದಿದ್ದಲ್ಲಿ ಸ್ವೀಕರಿಸಿದ ಅರ್ಜಿಗಳಲ್ಲಿ   ಮಂಜೂರಾಗದೇ ಬಾಕಿ ಉಳಿದ ಅರ್ಜಿಗಳನ್ನು ಲ್ಯಾಪ್ಸ್ ಎಂದು ಪರಿಗಣಿಸಲಾಗುವುದು ಎಂಬ ಸರ್ಕಾರದ ಆದೇಶವನ್ನು ಹಿಂಪಡೆ ಯಬೇಕೆಂದು ಅವರು ರಾಜ್ಯ ಸರ್ಕಾರ ವನ್ನು ಒತ್ತಾಯಿಸಿದರು.ರಾಜ್ಯದ ಹಲವು ಭಾಗಗಳಲ್ಲಿ ಬಿಸಿಎಂ ಹಾಸ್ಟೆಲ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಇದರಿಂದ ಗ್ರಾಮೀಣ ಭಾಗದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಬಿಸಿಎಂ ಹಾಸ್ಟೆಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬಿಸಿಎಂ ಇಲಾಖೆಯ ನೀತಿಯನ್ನು ಆಂಧ್ರಪ್ರದೇಶ ಸರ್ಕಾರದ ಬಿಸಿಎಂ ನೀತಿಯ ಮಾದರಿಯಲ್ಲಿ ಜಾರಿಗೆ ತರಬೇಕು ಹಾಗೂ ಹಾಸ್ಟೆಲ್‌ಗಳಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಲು  ಕ್ರಮ ಕೈಗೊಳ್ಳಬೇಕು ಹಾಗೂ    ಹಾಸ್ಟೆಲ್‌ನ ವಿದ್ಯಾರ್ಥಿಗಳು, ಮೇಲ್ವಿಚಾರಕರು, ಸಿಬ್ಬಂದಿ ವರ್ಗಗಳ ಹಾಜರಾತಿ     ಹಾಗೂ ಗೈರು ಹಾಜರಾತಿ ತಿಳಿದುಕೊಳ್ಳಲು ಬೆರಳಚ್ಚು (ಬಯೋಮೆಟ್ರಿಕ್ಸ್)     ಯಂತ್ರ ಅಳವಡಿಸಬೇಕೆಂದು ಆಗ್ರಹಿಸಿದರು.ತಮ್ಮ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಶಿವಲಿಂಗು ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನಗರ         ಕಾರ್ಯದರ್ಶಿ ಸಾಗರ ಅಂಗಡಿ, ದೇವರಾಜ, ರಾಘು, ಪ್ರವೀಣ, ಸಂತೋಷ, ರಾಥೋಡ, ಆಸಿಫ್ ಹಾಗೂ ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮಂದರಖಂಡಿ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry