`ಸರ್ಕಾರದ ಸೌಲಭ್ಯ ಸಮರ್ಪಕ ಬಳಕೆ ಅಗತ್ಯ'

ಶನಿವಾರ, ಜೂಲೈ 20, 2019
22 °C

`ಸರ್ಕಾರದ ಸೌಲಭ್ಯ ಸಮರ್ಪಕ ಬಳಕೆ ಅಗತ್ಯ'

Published:
Updated:

ಕಾರ್ಕಳ: ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ವಿವಿಧ ಸವಲತ್ತುಗಳು ದೊರೆಯುತ್ತಿದ್ದು, ಮುಸ್ಲಿಂ ಸಮುದಾಯ ಅವುಗಳ ಉಪಯೋಗವನ್ನು ಸಮರ್ಪಕವಾಗಿ ಪಡೆಯುತ್ತಿಲ್ಲ ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದರು.ಇಲ್ಲಿನ ಸಾಲ್ಮರದ ಜಮೀಯ್ಯತುಲ್ ಫಲಾಹ್ ಘಟಕದ ಕಚೇರಿಯಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಕುರಿತ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿಯಿಂದಾಗಿ ಸೂಕ್ತ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ ಎಂದರು.ಈ ಬಗ್ಗೆ ಜಮೀಯ್ಯತುಲ್ ಫಲಾಹ್‌ದಂತಹ ಸಂಘಟನೆಗಳು ಇಂತಹ ಶಿಬಿರಗಳ ಮೂಲಕ ಜನರಿಗೆ ತಲುಪುವಂತಹ ಕಾರ್ಯ ಮಾಡಬೇಕಾಗಿದೆ. ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದರು.ಜಮೀಯ್ಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಮೊಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಶ್ರೀಧರ ಭಂಡಾರಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ರಜತಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಜೀರ್ ಖಾನ್, ಕಾರ್ಯದರ್ಶಿ ಸಯ್ಯದ್ ಅಶ್ಫಕ್, ಕೋಶಾಧಿಕಾರಿ ಕೆ. ಶಾಬುಲಾಲ್, ಉಪಾಧ್ಯಕ್ಷ ಸೈಯ್ಯದ್ ಹಸನ್, ಸಂಘಟನಾ ಕಾರ್ಯದರ್ಶಿ ಸೈಯ್ಯದ್ ಅಬ್ಬಾಸ್, ಜತೆಕಾರ್ಯದರ್ಶಿ ಮೊಹಮ್ಮದ್ ಅಸ್ಲಂ, ಪತ್ರಿಕಾ ಕಾರ್ಯದರ್ಶಿ ಕೆ. ನಸೀರ್ ಖಾನ್. ಸದಸ್ಯರಾದ ಸಯ್ಯದ್ ಯುನುಸ್, ಎಚ್. ಸುಲೇಮಾನ್ ಬಜಗೋಳಿ, ಅಮೀರ್ ಹುಸೇನ್ ಕರಿಯಕಲ್ಲು, ಮೊಹಮ್ಮದ್ ಅಬ್‌ಜಾನ್ ಕುಂಟಲ್ಪಾಡಿ, ಇಜಾಸ್ ಶರೀಫ್ ಸಾಲ್ಮರ, ಸೈಯ್ಯದ್ ಅಹ್ಮದ್, ಮೊಹಮ್ಮದ್ ಮುಸ್ತಾಫ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry