ಸರ್ಕಾರವನ್ನು ಕಿತ್ತೆಸೆಯಿರಿ: ಸಿದ್ದು

7

ಸರ್ಕಾರವನ್ನು ಕಿತ್ತೆಸೆಯಿರಿ: ಸಿದ್ದು

Published:
Updated:ಹುಬ್ಬಳ್ಳಿ: ಭ್ರಷ್ಟ ಹಾಗೂ ಕೋಮುವಾದಿ ಆಗಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.ನಗರದ ಗದಗ ರಸ್ತೆಯಲ್ಲಿರುವ ಚಿಲ್ಲಿ ಮೈದಾನದಲ್ಲಿ ಯುವ ಕಾಂಗ್ರೆಸ್ ಗುರುವಾರ  ಆಯೋಜಿಸಿದ್ದ ‘ಯುವ ಹಾಗೂ ಸ್ವಚ್ಛ ರಾಜಕಾರಣಕ್ಕಾಗಿ ಯುವ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.‘ಮಾಟಮಂತ್ರ ಮಾಡಿ ನನ್ನನ್ನು ಕೊಲೆ ಮಾಡುವ ಸಂಚು ನಡೆದಿದೆ’ ಎಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಾಣ ರಕ್ಷಣೆ ಮಾಡಿಕೊಳ್ಳಲಾಗದ ವ್ಯಕ್ತಿಗೆ ಜನರನ್ನು ರಕ್ಷಣೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.‘ಮಾಟಮಂತ್ರವನ್ನು ನಾನು ಮಾಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. ನನ್ನ ಜೀವನದಲ್ಲಿ ಯಾವೊಬ್ಬ ಮಂತ್ರವಾದಿಯನ್ನಾದರೂ ನಾನು ನೋಡಿದ್ದೇನೆ ಎಂಬುದನ್ನು ಸಾಬೀತುಪಡಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry