ಸರ್ಕಾರಿ ಅನುದಾನ ಸಮರ್ಪಕ ಬಳಕೆ ಅಗತ್ಯ

7

ಸರ್ಕಾರಿ ಅನುದಾನ ಸಮರ್ಪಕ ಬಳಕೆ ಅಗತ್ಯ

Published:
Updated:

ಬಸವನಬಾಗೇವಾಡಿ: ಗ್ರಾಮ ಪಂಚಾಯಿತಿಗಳು ಸರ್ಕಾರದ ಅನುದಾನ ವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಿದಾಗ ಪ್ರಶಸ್ತಿಗೆ ಪಾತ್ರವಾಗುತ್ತವೆ ಎಂದು ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಹೇಳಿದರು.ಸ್ಥಳೀಯ ತಾ.ಪಂ ಸಭಾಂಗಣದಲ್ಲಿ ಪಂಚಾಯತ್ ರಾಜ ದಿನಾಚರಣೆ ಅಂಗವಾಗಿ ದೆಹಲಿಗೆ ತೆರಳಿದ್ದ ತಾ.ಪಂ ಅಧ್ಯಕ್ಷೆ ಹಾಗೂ ಚಿಮ್ಮಲಗಿ ಗ್ರಾ.ಪಂ ಅಧ್ಯಕ್ಷರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಇಚ್ಛಾಶಕ್ತಿ ಬೇಕು. ಅಂದಾಗ ಮಾತ್ರ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಯಾಗುತ್ತವೆ. ಇದರಿಂದ ಗ್ರಾಮಗಳ ಮೂಲ  ಸೌಲಭ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಇತರರಿಗೆ ಮಾದರಿಯಾಗಿವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾ.ಪಂ  ಉಪಾಧ್ಯಕ್ಷೆ ಅನ್ನಪೂಣ ಕಮತಗಿ, ಕಾರ್ಯನಿರ್ವಾಹಕ ಅಧಿಕಾರಿ ವಿ.ಎಂ.ಕೋನರಡ್ಡಿ ಇತರರು ಉಪಸ್ಥಿತರಿದ್ದರು.ಸನ್ಮಾನ: ಪಂಚಾಯತ್ ರಾಜ ದಿನಾಚರಣೆ ಅಂಗವಾಗಿ ದೆಹಲಿಗೆ ತೆರಳಿದ್ದ ತಾ.ಪಂ ಅಧ್ಯಕ್ಷೆ  ಅಲ್ಲಾಬಿ ಮುಜಾವರ, ಚಿಮ್ಮಲಗಿ ಗ್ರಾ.ಪಂ ಅಧ್ಯಕ್ಷೆ ಸುಶೀಲಾಬಾಯಿ ಪವಾರ ಹಾಗೂ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry